ದಾವಣಗೆರೆ: ಕೋವಿಡ್ ಲಸಿಕೆ ಪಡೆದ ಪೂರ್ವ ವಲಯದ ಐಜಿಪಿ - IGP S. Ravi reaction
ದಾವಣಗೆರೆ: 2ನೇ ಹಂತದ ಕೋವಿಡ್ ಲಸಿಕೆ ವಿತರಣೆ ಹಿನ್ನೆಲೆ ಇಂದು ದಾವಣಗೆರೆ ಪೂರ್ವ ವಲಯದ ಐಜಿಪಿ ಎಸ್. ರವಿ ಹಾಗೂ ಹೆಡ್ ಕಾನ್ಸ್ಟೇಬಲ್ ಸುರೇಶ್ ಬಾಬು ಲಸಿಕೆ ಹಾಕಿಸಿಕೊಂಡು ಇತರರಿಗೆ ಧೈರ್ಯ ತುಂಬಿದರು. ಕಳೆದ ಎರಡು ದಿನಗಳ ಹಿಂದೆ ದಾವಣಗೆರೆ ನಗರದಲ್ಲಿರುವ ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ಎಸ್ಪಿ ಹನುಮಂತರಾಯ ಹಾಗೂ ಡಿಸಿ ಮಹಾಂತೇಶ್ ಬೀಳಗಿಯವರೊಂದಿಗೆ ಸರ್ವೇಕ್ಷಣಾಧಿಕಾರಿ ಡಾ. ರಾಘವನ್ ಕೂಡ ವ್ಯಾಕ್ಸಿನ್ ಹಾಕಿಸಿಕೊಂಡು ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿರುವ ಕೊರೊನಾ ವಾರಿಯರ್ಸ್ಗಳಿಗೆ ರವಾನಿಸಿದ ಬೆನ್ನಲ್ಲೇ ಇದೀಗ ಐಜಿಪಿ ರವಿ ಅವರು ಲಸಿಕೆ ಹಾಕಿಸಿಕೊಂಡು ಇತರರಿಗೆ ಮಾದರಿಯಾಗಿದ್ದಾರೆ.