ನಿಮ್ಮ ಕಾಲಿಗೆ ಮುಳ್ಳು ಚುಚ್ಚಿದರೆ ನನ್ನ ಕಣ್ಣಲ್ಲಿ ನೀರು ಬರುತ್ತೆ ಎಂದ ಸವದಿ - Lakshmana Savadi by election campaign in chikkodi
ಚಿಕ್ಕೋಡಿ: ಕಾಗವಾಡದಲ್ಲಿ ಬಿಜೆಪಿಯಿಂದ ಚುನಾವಣೆಗೆ ನಿಂತಿರುವ ಅನರ್ಹ ಶಾಸಕ ಶ್ರೀಮಂತ್ ಪಾಟೀಲ್ ಪರ ಶಿರಗುಪ್ಪಿಯಲ್ಲಿ ಪ್ರಚಾರ ನಡೆಸಿದ ಡಿಸಿಎಂ ಲಕ್ಷ್ಮಣ್ ಸವದಿ, ಶ್ರೀಮಂತ್ ಪಾಟೀಲ್ರನ್ನು ಗೆಲ್ಲಿಸಿ ಸರ್ಕಾರ ಸುಭದ್ರಪಡಿಸುವಂತೆ ಮತದಾರರಲ್ಲಿ ಕೇಳಿಕೊಂಡರು. ಶ್ರೀಮಂತ ಪಾಟೀಲ ಆಯ್ಕೆಯಾದ ಬಳಿಕ ಮೂಲ ಬಿಜೆಪಿ ಕಾರ್ಯಕರ್ತರಲ್ಲಿ ನಮ್ಮನ್ನು ಕಡೆಗಣಿಸುತ್ತಾರೆ ಅಂತಾ ಅನುಮಾನ ಇರಬಹುದು. ಆದರೆ ಹಾಗಾಗದು ಎಂದು ನಾನು ಮಾತು ಕೊಡುತ್ತೇನೆ ಬಿಜೆಪಿ ಪಕ್ಷಕ್ಕಾಗಿ ಯಡಿಯೂರಪ್ಪರಿಗಾಗಿ 15 ದಿನ ಪ್ರಾಮಾಣಿಕವಾಗಿ ದುಡಿಯಿರಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
TAGGED:
Lakshmana Savadi news