ಆಧಾರ್ ಕಾರ್ಡ್ ಇದ್ದರೆ ವೃದ್ಧಾಪ್ಯ ವೇತನ ನೀಡುತ್ತೇವೆ : ಕಂದಾಯ ಸಚಿವ ಆರ್.ಅಶೋಕ್
ಪೊನ್ನಂಪೇಟೆ/ಕೊಡಗು: ಮುಂದಿನ ದಿನಗಳಲ್ಲಿ ವೃದ್ಧಾಪ್ಯ ವೇತನಕ್ಕೆ ಅರ್ಜಿ ಸಲ್ಲಿಸಬೇಕಿಲ್ಲ. ಆಧಾರ್ ಕಾರ್ಡ್ ಆಧಾರದಲ್ಲಿ ನಾವೇ ವೃದ್ಧಾಪ್ಯ ವೇತನ ನೀಡುತ್ತೇವೆ ಎಂದು ಕಂದಾಯ ಸಚಿವ ಆರ್. ಅಶೋಕ್ ಭರವಸೆ ನೀಡಿದ್ದಾರೆ. ಪೊನ್ನಂಪೇಟೆ ನೂತನ ತಾಲೂಕಿನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಜಿಲ್ಲಾಧಿಕಾರಿ ಕಚೇರಿಯಲ್ಲಿ ಎಲ್ಲರ ಆಧಾರ್ ಕಾರ್ಡ್ ಇದ್ದೇ ಇರುತ್ತದೆ. ಯಾರಿಗೆಲ್ಲಾ 60 ವರ್ಷವಾಗಿದೆಯೋ ಅವರೆಲ್ಲರಿಗೂ ವೃದ್ಧಾಪ್ಯ ವೇತನ ಹಾಕಲಾಗುವುದು. ಈ ಕುರಿತು ಈಗಾಗಲೇ ಕೆಲಸ ಆರಂಭವಾಗಿದೆ ಎಂದು ಆರ್.ಅಶೋಕ್ ಹೇಳಿದ್ದಾರೆ.