ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿ ಇದ್ದರೆ ತಾನೆ, ಅನರ್ಹರು ಮಂತ್ರಿಗಳಾಗೋದು: ಎಚ್ಡಿಕೆ - ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ
ಮೈಸೂರು: ಅನರ್ಹ ಶಾಸಕರು ಚುನಾವಣೆಯಲ್ಲಿ ಗೆದ್ದಮೇಲೆ ಮಂತ್ರಿ ಆಗುತ್ತೇವೆ ಅಂತ ಬೀಗುತ್ತಿದ್ದಾರೆ. ಆದರೆ ಡಿ. 9ರ ನಂತರ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿ ಇದ್ದರೆ ತಾನೆ ಅನರ್ಹ ಶಾಸಕರು ಮಂತ್ರಿಗಳಾಗೋದು ಎಂದು ಮೈಸೂರಿನ ಹುಣಸೂರಿನ ಬಿಳಿಕೆರೆಯಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಅನರ್ಹ ಶಾಸಕರು ಏನೇ ರಾಜಕೀಯ ತಂತ್ರಗಾರಿಕೆ ಮಾಡಿದರೂ, ನಯ ವಿನಯದಿಂದ ಮಾತನಾಡಿದರೂ ಅವರೆಲ್ಲರೂ ಸೋಲುವುದು ಖಚಿತ. ಹುಣಸೂರಿನ ಅನರ್ಹ ಶಾಸಕ ಹೆಚ್.ವಿಶ್ವನಾಥ್ ಜನಪರ ಕೆಲಸ ಮಾಡದೆ ತಮಗೆ ಏನು ಬೇಕೊ ಹಾಗೆ ಅನುಕೂಲವಾಗುವಂತೆ ಸ್ವಾರ್ಥ ಕಾರ್ಯ ಮಾಡಿಕೊಂಡಿದ್ದಾರೆ. ಈ ಮೂಲಕ ಜನರ ಕಷ್ಟ ಸುಖಗಳಿಗೆ ಸ್ಪಂದಿಸದೆ ವಿಶ್ವನಾಥ್ ತಮ್ಮ ಕಿಮ್ಮತ್ತು ಹೆಚ್ಚಿಸಿಕೊಂಡಿದ್ದಾರೆ.ಚುನಾವಣೆ ಆದ ಮೇಲೆ ಅವರು ಎಲ್ಲಿರುತ್ತಾರೋ ಗೊತ್ತಿಲ್ಲ ಎಂದರು.