ಅಮೆರಿಕಾದ ಚುನಾವಣೆಯಲ್ಲಿ ಟ್ರಂಪ್ ಸೋತರೆ ಭಾರತ, ಅಮೆರಿಕಾ ಸಂಬಂಧ ಏನಾದೀತು?: ಉಗ್ರಪ್ಪ
ಬಳ್ಳಾರಿ: ಟ್ರಂಪ್ ಬಗ್ಗೆ ಪ್ರಚಾರ ಮಾಡಲು ಭಾರತದ ಪ್ರಧಾನಿ ನರೇಂದ್ರ ಮೋದಿ ಅಮೆರಿಕಕ್ಕೆ ಪ್ರಯಾಣ ಮಾಡುತ್ತಾರೆ. ಆದ್ರೆ ಟ್ರಂಪ್ ಸೋತರೆ ಮುಂದೆ ಭಾರತ ಮತ್ತು ಅಮೆರಿಕಾದ ಸಂಬಂಧ ಹೇಗೆ? ಏನಾಗುತ್ತದೆ. ಕರ್ನಾಟಕದಲ್ಲಿ ನೆರೆಹಾವಳಿ ಇದ್ದರೂ ಇದರ ಬಗ್ಗೆ ಯಾವುದೇ ಮಾತನಾಡಿಲ್ಲ. ಆದರೆ ಅಮೆರಿಕಾದಲ್ಲಿ ಟ್ರಂಪ್ ಪರ ಕ್ಯಾಂಪೇನ್ ಮಾಡುತ್ತಾರೆ ಎಂದು ಬಳ್ಳಾರಿ ಮಾಜಿ ಸಂಸದ ವಿ.ಎಸ್ ಉಗ್ರಪ್ಪ ಟೀಕಿಸಿದ್ರು.