'ಸದ್ಯಕ್ಕೆ ಕಷ್ಟ ಆಗಬಹುದು ಆದರೆ ಕೋವಿಡ್ ಪ್ರಮಾಣ ಇಳಿದರೆ ವಹಿವಾಟು ಬೆಳೆಯುತ್ತೆ' - ಕೋವಿಡ್ ನಿಯಂತ್ರಣಕ್ಕೆ ನಿರ್ಬಂಧ
ಬೆಂಗಳೂರು: ನಿನ್ನೆ ಕೋವಿಡ್ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಕೆಲ ನಿರ್ಬಂಧ ಹೇರಿದ್ದು, ಇದರಿಂದ ಆರ್ಥಿಕ ಚಟುವಟಿಕೆಗೆ ಪೆಟ್ಟು ಬೀಳುವುದು ನಿಶ್ಚಿತ. ಆದರೆ ಕೆಲ ದಿನಗಳಲ್ಲಿ ಕೋವಿಡ್ ಸರಪಳಿ ಕಡಿತಗೊಳಿಸಬೇಕು ಇದರಿಂದ ಮುಂದಿನ ಭವಿಷ್ಯ ಉತ್ತಮವಾಗಿರುತ್ತದೆ ಎಂದು ನಗರ ಜವಳಿ ಸಗಟು ವ್ಯಾಪಾರ ಸಂಘ ಅಧ್ಯಕ್ಷ ಪ್ರಕಾಶ್ ಪಿರ್ಗಲ್ ಹೇಳಿದರು.