5 ವರ್ಷದಿಂದ ನಮ್ಮ ಗೋಳು ಕೇಳುವವರು ಇಲ್ಲ: ಡಿ ಕೆ ರವಿ ತಾಯಿ ಅಳಲು - ಡಿಕೆ ರವಿ ತಾಯಿ ಗೌರಮ್ಮ ನ್ಯೂಸ್
ಬೆಂಗಳೂರು: ಅಸಹಜವಾಗಿ ಸಾವಿಗೀಡಾದ ದಕ್ಷ ಐಎಎಸ್ ಅಧಿಕಾರಿ ಡಿ.ಕೆ. ರವಿ ಅವರ ತಾಯಿ ಇಂದು ಸಿಎಂ ಅವರನ್ನು ಭೇಟಿ ಮಾಡಿ ಮಗನ ಸಮಾಧಿ ಸ್ಥಳವನ್ನು ಅಭಿವೃದ್ಧಿಪಡಿಸುವಂತೆ ಮನವಿ ಮಾಡಿದರು. ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಐದು ವರ್ಷದಿಂದ ನಮ್ಮ ಗೋಳು ಕೇಳುವವರು ಯಾರೂ ಇಲ್ಲ, ಅಭಿವೃದ್ಧಿ ಮಾಡಲಾಗುವುದು ಎಂದು ಆಶ್ವಾಸನೆ ಕೊಟ್ಟವರು ಯಾರೂ ಏನೂ ಮಾಡಿಲ್ಲ. ಡಿಕೆ ರವಿ ಪತ್ನಿ ಇದ್ದ ಎಲ್ಲಾ ಹಣವನ್ನು ತೆಗೆದುಕೊಂಡು ಹೋಗಿದ್ದಾರೆ. ನನ್ನ ಮಗ ಐಎಎಸ್ ಅಧಿಕಾರಿ ಆದರೂ ಬೇರೆಯವರ ಮನೆ ಮುಂದೆ ಅಲೆಯುವ ಪರಿಸ್ಥಿತಿ ಬಂದಿದೆ ಎಂದು ವಿಷಾದ ವ್ಯಕ್ತಪಡಿಸಿದರು.