ಯಡಿಯೂರಪ್ಪ ಸರ್ಕಾರದಲ್ಲಿ ಸಚಿವನಾಗುವುದಿಲ್ಲ; ಇದು ನನ್ನ ಭೀಷ್ಮ ಪ್ರತಿಜ್ಞೆ: ಯತ್ನಾಳ್ - Basangouda Patil Yatnal
ತುಮಕೂರು: ನಾನು ಯಾವುದೇ ಪರಿಸ್ಥಿತಿಯಲ್ಲೂ ಯಡಿಯೂರಪ್ಪ ಸರ್ಕಾರದಲ್ಲಿ ಸಚಿವನಾಗುವುದಿಲ್ಲ. ಇದು ನನ್ನ ಭೀಷ್ಮಪ್ರತಿಜ್ಞೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದ್ದಾರೆ. ಉಪಮುಖ್ಯಮಂತ್ರಿ ಸ್ಥಾನದ ಜತೆಗೆ ಇಂಧನ, ಜಲಸಂಪನ್ಮೂಲ, ಗೃಹ ಖಾತೆ ನೀಡುತ್ತೇನೆ ಎಂದರೂ ನಾನು ಸಚಿವನಾಗಿ ಕೆಲಸ ಮಾಡುವುದಿಲ್ಲ ಎಂದರು. ಜನರ ಪರವಾಗಿ ನನ್ನ ಹೋರಾಟ ಮುಂದುವರೆಯಲಿದ್ದು, ನೀರಾವರಿ ಸಲುವಾಗಿ ಹೆಚ್ಚಿನ ಅನುದಾನ ನೀಡಲಿ ಎಂದರು. ಮಂತ್ರಿ ಸ್ಥಾನ ಬಯಸಿ, ನಾನು ಯಡಿಯೂರಪ್ಪ ಅವರ ಬಳಿ ಹೋಗಿದ್ರೆ ರಾಜಕೀಯ ನಿವೃತ್ತಿ ಪಡೆದುಕೊಳ್ಳುತ್ತೇನೆ. ಸಮಗ್ರ ಕರ್ನಾಟಕ ಅಭಿವೃದ್ಧಿಯಾಗಬೇಕಾಗಿರುವುದರಿಂದ ನನ್ನ ಹೋರಾಟ ಮುಂದುವರೆದಿದ್ದು, ವಾಜಪೇಯಿ ಅವರ ಕಾಲದಲ್ಲೇ ನಾನು ಮಂತ್ರಿಯಾದವನು ಎಂದರು.
Last Updated : Mar 26, 2021, 10:22 AM IST