ಕಳೆದ ಅಧಿವೇಶನದಲ್ಲಿ ಅನಾರೋಗ್ಯ ಕಾರಣದಿಂದ ಮುಂಬಯಿ ಆಸ್ಪತ್ರೆಗೆ ದಾಖಲಾಗಿದ್ದೆ : ಶ್ರೀಮಂತ ಪಾಟೀಲ ಸ್ಪಷ್ಟನೆ - ಕಾಗವಾಡ ಅನರ್ಹ ಶಾಸಕ ಶ್ರೀಮಂತ ಪಾಟೀಲ
ಚಿಕ್ಕೋಡಿ: ಅನಾರೋಗ್ಯದ ಕಾರಣದಿಂದಾಗಿ ಕಳೆದ ಅಧಿವೇಶನದ ವೇಳೆ ನಾನು ಮುಂಬೈ ಆಸ್ಪತ್ರೆಗೆ ದಾಖಲಾಗಿದ್ದೆ ಎಂದು ಕಾಗವಾಡ ಅನರ್ಹ ಶಾಸಕ ಶ್ರೀಮಂತ ಪಾಟೀಲ ಹೇಳಿಕೆ ನೀಡಿದ್ದಾರೆ. ಕಾಗವಾಡ ತಾಲೂಕಿನ ಕೆಂಪವಾಡ ಸಕ್ಕರೆ ಕಾರ್ಖಾನೆಯ ತಮ್ಮ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಸ್ಪೀಕರ್ಗೆ ನಾನು ಎಲ್ಲ ದಾಖಲೆ ಕಳಿಸಿ ಗೈರು ಹಾಜರಾತಿಗೆ ಅನುಮತಿ ಕೋರಿದೆ. ಆದರೆ, ಅವರು ಅನುಮತಿ ನೀಡದೇ ಅನರ್ಹ ಮಾಡಿದ್ದರು. ಸದ್ಯ ಮತ್ತೆ ಚುನಾವಣೆಗೆ ಸ್ಪರ್ಧಿಸಲು ಅವಕಾಶ ಕೇಳಿ ಸಿದ್ದತೆ ಮಾಡಿಕೊಂಡಿದ್ದೆವು. ಆದರೆ, ಸುಪ್ರೀಂಕೋರ್ಟ್ ಸಂಪೂರ್ಣ ಚುನಾವಣೆಗೆ ತಡೆ ನೀಡಿದೆ. ಮುಂಬರುವ ದಿನಗಳಲ್ಲಿ ನನಗೆ ನ್ಯಾಯ ಸಿಗುವ ನಿರೀಕ್ಷೆ ಇದೆ ಎಂದು ತಿಳಿಸಿದರು.