ಇದು 'ಕ-ಕ'ದ ನಂಬರ್ ಒನ್ ‘ಟೂ ವ್ಹೀಲರ್’ ಸಂಡೇ ಮಾರ್ಕೆಟ್.. - ಹೈಕ ಭಾಗದ ನಂಬರ್ ಒನ್ ‘ಟೂ ವ್ಹೀಲರ್’ ಸಂಡೆ ಮಾರ್ಕೆಟ್
ಗಂಗಾವತಿಯ ಜುಲೈ ನಗರದಲ್ಲಿರುವ ಈ ಮಾರುಕಟ್ಟೆಗೆ ಸಂಡೇ ಬಂತು ಎಂದರೆ ಸಾಕು ಸಾವಿರಾರು ವಾಹನಗಳು ಬರುತ್ತವೆ. ಕೇವಲ ಕೊಪ್ಪಳ ಮಾತ್ರವಲ್ಲ ರಾಯಚೂರು, ಬಳ್ಳಾರಿ, ಗದಗ ಸೇರಿ ಸುತ್ತಲಿನ ಜಿಲ್ಲೆ ಮತ್ತು ತಾಲೂಕು ಕೇಂದ್ರಗಳಿಂದಲೂ ವಾಹನಗಳು ಬರುತ್ತವೆ. ಈ ಮಾರುಕಟ್ಟೆಯಲ್ಲಿ ನಿಲ್ಲಿಸಿರುವ ವಾಹನಗಳನ್ನು ನೋಡುವುದೇ ವಾಹನ ಪ್ರಿಯರಿಗೆ ಹಬ್ಬ..