ಕರ್ನಾಟಕ

karnataka

ETV Bharat / videos

ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವುದು ವಚನಭ್ರಷ್ಟ ಸರ್ಕಾರ: ವಾಲ್ಮೀಕಿ ಸಂಘ ಆರೋಪ - ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವುದು ವಚನ ಭ್ರಷ್ಟ ಸರ್ಕಾರ

By

Published : Mar 12, 2020, 11:28 PM IST

ರಾಯಚೂರು: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ವಚನಭ್ರಷ್ಟ ಸರ್ಕಾರವಾಗಿದೆ ಎಂದು ಹೈದರಾಬಾದ್ ಕರ್ನಾಟಕ ಪ್ರದೇಶ ವಾಲ್ಮೀಕಿ ಸಂಘದ ಮುಖಂಡರು ಆರೋಪಿಸಿದ್ದಾರೆ. ಸಿಎಂ ಬಿ.ಎಸ್. ಯಡಿಯೂರಪ್ಪ ತಾವು ಅಧಿಕಾರಕ್ಕೆ ಬಂದ ಕೇವಲ 24 ಗಂಟೆಗಳಲ್ಲಿ ಎಸ್.ಟಿ. ಮೀಸಲಾತಿಯನ್ನ ಕೇಂದ್ರ ಮಾದರಿಯಂತೆ 7.5% ಮಾಡುವುದಾಗಿ, ಶ್ರೀರಾಮುಲು ಅವರನ್ನು ಡಿಸಿಎಂ ಮಾಡುವುದಾಗಿ ಮಾತು ನೀಡಿದ್ರು. ಇತ್ತೀಚೆಗೆ ಪರಿಶಿಷ್ಟ ಪಂಗಡ ಜನಾಂಗ ಶ್ರೇಯೋಭಿವೃದ್ಧಿಗೆ ಪ್ರತ್ಯೇಕ ಸಚಿವಾಲಯ ಆರಂಭಿಸುವುದಾಗಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭರವಸೆ ನೀಡಿದ್ರು. ಆದ್ರೆ ಕೊಟ್ಟ ಮಾತಿನಂತೆ ಯಾವುದೇ ಸೌಲಭ್ಯವನ್ನ ವಾಲ್ಮೀಕಿ ಸಮುದಾಯಕ್ಕೆ ನೀಡದೇ ವಚನ ಭ್ರಷ್ಟ ಸರ್ಕಾರವಾಗಿದೆ ಎಂದು ಆಕ್ರೋಶ‌ ವ್ಯಕ್ತಪಡಿಸಿದ್ರು.

For All Latest Updates

TAGGED:

ABOUT THE AUTHOR

...view details