ಡಣಾಯಕನ ಕೆರೆ ಕೋಡಿ ಒಡೆದು ಫಸಲಿಗೆ ಬಂದ ನೂರಾರು ಎಕರೆ ಬೆಳೆ ಹಾನಿ - ಡಣಾಯಕನ ಕೆರೆ ಕೋಡಿ
ತಾಲೂಕಿನ ಮರಿಯಮ್ಮನಹಳ್ಳಿಯ ಡಾಣಾಯಕನ ಕೆರೆ ಕೋಡಿ ಒಡೆದು ನೂರಾರು ಎಕರೆ ಬೆಳೆಗೆ ನೀರು ನುಗ್ಗಿದ ಪರಿಣಾಮ ಅವಾಂತರ ಸೃಷ್ಟಿಯಾಗಿದೆ. ಮೆಕ್ಕೆಜೋಳ, ಈರುಳ್ಳಿ, ಭತ್ತ ಸೇರಿದಂತೆ ನಾನಾ ಬೆಳೆಗಳಿಗೆ ಕೆರೆ ನೀರು ನುಗ್ಗಿದೆ. ಕಳೆದ ವಾರ ಉತ್ತಮ ಮಳೆಯಾದ ಪರಿಣಾಮ ಕೆರೆ ಸಂಪೂರ್ಣ ಭರ್ತಿಯಾಗಿತ್ತು.