ಹಸಿರು ಭೂಮಿ ಪ್ರತಿಷ್ಠಾನದ ಯೋಜನೆ ಫಲ: ಸ್ವಚ್ಛಂದವಾಯ್ತು ಹಾಸನದ ಹುಣಸಿನಕೆರೆ - Hunasikere
ಹಾಸನ: ನಗರದ ಐತಿಹಾಸಿಕ ಹುಣಸಿನಕೆರೆ ಸ್ವಚ್ಛತೆಗೆ ಪಣತೊಟ್ಟು ಕಾರ್ಯ ಕೈಗೆತ್ತಿಕೊಂಡಿದ್ದ ಹಸಿರು ಭೂಮಿ ಪ್ರತಿಷ್ಠಾನದ ಮಹತ್ವಕಾಂಕ್ಷಿ ಯೋಜನೆಗೆ ವರ್ಷ ತುಂಬುತ್ತಿದ್ದು, ಕೆರೆಯ ಶೇ. 80ರಷ್ಟು ಭಾಗ ಸ್ವಚ್ಛಂದವಾಗಿದೆ. 2019ರ ಆಗಸ್ಟ್ 1ರಂದು ಹುಣಸಿನಕೆರೆ ಸಂರಕ್ಷಣಾ ಅಭಿವೃದ್ಧಿ ಸಮಿತಿ ರಚಿಸಿ ಮುಂದಿನ ಆ. 1ರ ಒಳಗೆ ಸುಂದರ ಕೆರೆಯಾಗಿ ಮಾರ್ಪಡಿಸುವ ಪ್ರತಿಜ್ಞೆಯನ್ನು ಸ್ಥಳೀಯ ನಿವಾಸಿಗಳು ಹಾಗೂ ಹಸಿರು ಭೂಮಿ ಪ್ರತಿಷ್ಠಾನದ ಪದಾಧಿಕಾರಿಗಳು ಕೈಗೊಂಡಿದ್ದರು. ಅದರಂತೆ ವರ್ಷ ಪೂರ್ತಿ ಕೆಲಸ ಮಾಡಲಾಗುತ್ತಿದ್ದು, ಉಳಿದ ಶೇ. 20 ರಷ್ಟು ಕಾರ್ಯ ಭರದಿಂದ ಸಾಗಿದೆ. ಸುಮಾರು 213 ಎಕರೆ ವಿಸ್ತಾರವಾದ ಕೆರೆಯಲ್ಲಿ ಕಳೆ ಹಾಗೂ ಹೂಳು ತುಂಬಿ ಸ್ವರೂಪವನ್ನೇ ಕಳೆದುಕೊಂಡಿತ್ತು. ಈಗ ಪರಿಸ್ಥಿತಿ ತುಂಬಾ ಬದಲಾಗಿದ್ದು, ಸುಂದರ ಪ್ರವಾಸಿ ತಾಣವಾಗಿ ಹುಣಸಿನಕೆರೆ ಮಾರ್ಪಾಡಾಗಿದೆ ಎಂದು ಹುಣಸಿನಕೆರೆ ಸಂರಕ್ಷಣಾ ಅಭಿವೃದ್ಧಿ ಸಮಿತಿಯ ಕಾರ್ಯದರ್ಶಿ ದೇವಿಕಾ ಮಧು ಈಟಿವಿ ಭಾರತ ಸಂದರ್ಶನದಲ್ಲಿ ತಿಳಿಸಿದ್ದಾರೆ.
Last Updated : Jul 21, 2020, 10:22 AM IST