ಕಪ್ಪತಗುಡ್ಡದಲ್ಲಿ ಮತ್ತೆ ಕಾಣಿಸಿಕೊಂಡ ಬೆಂಕಿ; ಸುಟ್ಟು ಕರಕಲಾದ ಔಷಧೀಯ ಸಸ್ಯಗಳು - Kappatagudda fire news
ಗದಗ: ಜಿಲ್ಲೆಯ ಸಹ್ಯಾದ್ರಿ ಕಪ್ಪತಗುಡ್ಡದಲ್ಲಿ ಮತ್ತೆ ಬೆಂಕಿ ಕಾಣಿಸಿಕೊಂಡಿದೆ. ದಟ್ಟವಾದ ಹೊಗೆಯಲ್ಲಿ ಕಪ್ಪತಗುಡ್ಡ ಆವರಿಸಿಕೊಂಡಿದೆ. ಶಿರಹಟ್ಟಿ ತಾಲೂಕಿನ ಕಡಕೋಳ ಬಳಿಯ ಕಪ್ಪತಮಲ್ಲಯ್ಯನ ದೇವಸ್ಥಾನದ ಬಳಿ ಇಂದು ಮಧ್ಯಾಹ್ನ ಬೆಂಕಿ ಬಿದ್ದಿದೆ. ಇದರಿಂದಾಗಿ ಅಪಾರ ಪ್ರಮಾಣದ ಆಯುರ್ವೇದ ಔಷಧೀಯ ಸಸ್ಯಗಳು ಸುಟ್ಟಿವೆ. ಕಳೆದ ಬುಧವಾರವೂ ಚಿಕ್ಕವಡ್ಡಟ್ಟಿ ಗ್ರಾಮದ ಬಳಿ ಕಾಣಿಸಿಕೊಂಡಿದ್ದ ಬೆಂಕಿ, ಕಪ್ಪತ್ತಮಲ್ಲಯ್ಯನ ಗುಡ್ಡದವರೆಗೂ ತನ್ನ ಕೆನ್ನಾಲಿಗೆ ಚಾಚಿಕೊಂಡಿತ್ತು. ಪ್ರತಿ ವರ್ಷ ಬೇಸಿಗೆ ಕಾಲದಲ್ಲಿ ಬೆಂಕಿ ಪ್ರಕರಣಗಳು ಕಂಡು ಬರುತ್ತಿದ್ದವು. ಆದರೆ, ಈಗ ಚಳಿಗಾಲ ಆರಂಭದಲ್ಲಿ ಹಚ್ಚ ಹಸಿರಿನಲ್ಲಿ ಬೆಂಕಿ ಬಿದ್ದಿದ್ದು ಸಾಕಷ್ಟು ಅನುಮಾನಕ್ಕೆ ಕಾರಣವಾಗುತ್ತಿದೆ.