ಅಪ್ಪು ಹೆಸರಲ್ಲಿ ಅನ್ನಸಂತರ್ಪಣೆ: ಪ್ಯಾಲೇಸ್ ಗ್ರೌಂಡ್‌ನಲ್ಲಿ ಅಭಿಮಾನಿ ಸಾಗರ, ಪೊಲೀಸರ ಹರಸಾಹಸ - ಗಾಯತ್ರಿ ವಿಹಾರ್ ಗೇಟ್
ಸಂಜೆ ಆಗುತ್ತಾ ಬಂದರೂ ದಿವಂಗತ ಪುನೀತ್ ರಾಜಕುಮಾರ್ ಅನ್ನಸಂತರ್ಪಣೆಗೆ ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಆಗಮಿಸುತ್ತಲೇ ಇದ್ದಾರೆ. ಇಲ್ಲಿಯತನಕ 28 ರಿಂದ 30 ಸಾವಿರ ಅಭಿಮಾನಿಗಳಿಗೆ ಅನ್ನ ಸಂತರ್ಪಣೆ ಮಾಡಲಾಗಿದೆ. ಇನ್ನೂ 5 ಸಾವಿರಕ್ಕಿಂತ ಹೆಚ್ಚಿನ ಅಭಿಮಾನಿಗಳು ಗಾಯತ್ರಿ ವಿಹಾರ್ ಕಾಂಪೌಂಡ್ ಬಳಿ ಸೇರಿದ್ದಾರೆ. ಜನಸಂದಣಿ ನಿಯಂತ್ರಿಸಲು ಗೇಟ್ ಮುಚ್ಚಿ ಸಾರ್ವಜನಿಕರನ್ನು ಪ್ಯಾಲೇಸ್ ಗ್ರೌಂಡ್ ಒಳಗೆ ಬಿಡಲು ಖಾಕಿ ಪಡೆ ನಿರಾಕರಿಸುತ್ತಿದ್ದು, ಕಾಂಪೌಂಡ್ ಹತ್ತಿ ಪೊಲೀಸರ ಕಣ್ತಪ್ಪಿಸಿ ಜನರು ಒಳನುಗ್ಗುತ್ತಿದ್ದಾರೆ. ಹೀಗಾಗಿ ಜನರನ್ನು ನಿಯಂತ್ರಿಸಲು ಸ್ವತಃ ಡಿಸಿಪಿ ಅನುಚೇತ್ ಅವರೇ ಫೀಲ್ಡ್ಗಿಳಿದಿದ್ದಾರೆ. ಸದ್ಯ ನಾನ್ ವೆಜ್ನಲ್ಲಿ ಉಳಿದಿರುವುದು ಚಿಕನ್ ಕಬಾಬ್ ಮಾತ್ರ, ಇದೂ ಖಾಲಿಯಾದರೆ ಕೊನೆ ಪಕ್ಷ ಅನ್ನ ರಸಂ ನೀಡುವಂತೆ ಬಾಣಸಿಗರಿಗೆ ಸೂಚನೆ ನೀಡಲಾಗಿದೆ. ಹೀಗಾಗಿ 5 ರಿಂದ 8 ಸಾವಿರ ಮಂದಿಗೆ ಆಗುವಷ್ಟು ಗೀರೈಸ್, ಅನ್ನ ರಸಂ ಮತ್ತೆ ಮಾಡಲಾಗುತ್ತಿದೆ. ಇತ್ತ ಗಾಯತ್ರಿ ವಿಹಾರ್ ಗೇಟ್ಗಳನ್ನು ಪೊಲೀಸರು ಬಂದ್ ಮಾಡಿರುವ ಹಿನ್ನೆಲೆಯಲ್ಲಿ ಪಾರ್ಕ್ ಮಾಡಿರುವ ವಾಹನಗಳನ್ನು ಪಡೆಯಲು ಸಾರ್ವಜನಿಕರು ಪರದಾಡುವಂತಾಗಿದೆ.
Last Updated : Nov 9, 2021, 4:20 PM IST