ಕರ್ನಾಟಕ

karnataka

ETV Bharat / videos

ಬೈಕ್ ಸೀಟ್ ಕೆಳಗೆ ಅವಿತು ಮಲಗಿದ್ದ ನಾಗಪ್ಪ... ಪ್ರವಾಸಕ್ಕೆ ಬಂದವರಿಗೆ ಶಾಕ್​ - ಚಿಕ್ಕಮಗಳೂರು ನಾಗರಹಾವು ನ್ಯೂಸ್​

By

Published : Feb 5, 2020, 4:28 PM IST

ಚಿಕ್ಕಮಗಳೂರಿಗೆ ಪ್ರವಾಸಕ್ಕೆಂದು ಬೈಕ್​ನಲ್ಲಿ ಬಂದಿದ್ದ ಪ್ರವಾಸಿಗರ ಬೈಕ್​ನಲ್ಲಿ ಬೃಹತ್ ಗಾತ್ರದ ನಾಗರಹಾವು ಸೇರಿಕೊಂಡು ಪ್ರವಾಸಿಗರನ್ನು ಬೆಚ್ಚಿ ಬೀಳಿಸಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿ ಪ್ರವಾಸಿ ತಾಣದಲ್ಲಿ ಕಂಡುಬಂದಿದೆ. ಚಿತ್ರದುರ್ಗದಿಂದ ಆಗಮಿಸಿದ್ದ ಸ್ನೇಹಿತರು, ಬೈಕ್​ಗಳನ್ನು ರಸ್ತೆಯಲ್ಲಿ ಪಾರ್ಕ್ ಮಾಡಿ, ಪ್ರವಾಸಿ ತಾಣ ನೋಡಿಕೊಂಡು ಬರುವಷ್ಟರಲ್ಲಿ ಬೃಹತ್ ಗಾತ್ರದ ನಾಗರಹಾವು ಬೈಕ್ ಸೀಟ್ ಕೆಳಗೆ ಅವಿತು ಮಲಗಿತ್ತು. ಬೈಕ್ ಸ್ಟಾರ್ಟ್ ಮಾಡುವ ವೇಳೆ ಬೈಕ್​ನಲ್ಲಿ ಹಾವು ಬುಸುಗುಟ್ಟಿದ ಶಬ್ದ ಕೇಳಿ, ಪ್ರವಾಸಿಗರು ಬೆಚ್ಚಿ ಬಿದ್ದಿದ್ದಾರೆ. ಕೂಡಲೇ ಸ್ಥಳೀಯರು ಸ್ನೇಕ್ ಆರೀಫ್ ಅವರಿಗೆ ಫೋನ್ ಮಾಡಿ ಸ್ಥಳಕ್ಕೆ ಬರುವಂತೆ ಮನವಿ ಮಾಡಿದ್ದರು. ಸ್ಥಳಕ್ಕಾಗಮಿಸಿದ ಆರೀಫ್ ಈ ಬೃಹತ್ ಗಾತ್ರದ ನಾಗರ ಹಾವನ್ನು ಸೆರೆ ಹಿಡಿದು ಚಾರ್ಮಾಡಿ ಘಾಟಿ ಅರಣ್ಯ ಪ್ರದೇಶದಲ್ಲಿ ಬಿಟ್ಟರು.

ABOUT THE AUTHOR

...view details