ಕೊರೊನಾ ತಡೆಗೆ ಸಗಣಿ ಮೊರೆ ಹೋದ ಹುಬ್ಬಳ್ಳಿ ಮಹಿಳಾಮಣಿಗಳು! - corona
ಹುಬ್ಬಳ್ಳಿ: ಕೊರೊನಾ ವೈರಸ್ ಮಹಾಮಾರಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹುಬ್ಬಳ್ಳಿ ಜೋಳದ ಓಣಿಯ ಮಹಿಳೆಯರು ವೈರಸ್ ನಿಯಂತ್ರಣ ಮಾಡಲು ಭಾರತೀಯ ಸಂಪ್ರದಾಯದಂತೆ ಮನೆಯನ್ನು ಶುಚಿಗೊಳಿಸಿ ಮನೆಯಲ್ಲಿ ಸಗಣಿಯ ಕುಳ್ಳು, ಏಲಕ್ಕಿ, ಲವಂಗ, ಕರ್ಪೂರದ ಹೊಗೆ ಹಾಕುವುದರಿಂದ ವೈರಸ್ನಿಂದ ದೂರ ಇರಬಹುದು ಎಂದು ಜಾಗೃತಿ ಮೂಡಿಸಿದ್ದಾರೆ. ಇನ್ನು ಈ ವೈರಸ್ ನಿಯಂತ್ರಣಕ್ಕೆ ಔಷಧಿ ಕಂಡುಹಿಡಿಯಲು ಇನ್ನಿಲ್ಲದ ಕಸರತ್ತು ನಡೆಯುತ್ತಿದೆ. ಆದ್ರೆ ನಗರದ ಮಹಿಳೆಯರು ಸಗಣಿಯಿಂದಲೂ ವೈರಸ್ ತಡೆಯಬಹುದು ಎನ್ನುತ್ತಿದ್ದಾರೆ. ಇದು ಎಷ್ಟರ ಮಟ್ಟಿಗೆ ಪರಿಣಾಮ ಬೀರುವುದು ಎಂಬುದನ್ನು ನೋಡಬೇಕಿದೆ.