ವಿಶಿಷ್ಟ ಪ್ಲಾಸ್ಟಿಕ್ ಅಭಿಯಾನದ ಮೂಲಕ ಜಾಗೃತಿ ಮೂಡಿಸುವ ಹುಬ್ಬಳ್ಳಿ ವೀರಪ್ಪ - ಹುಬ್ಬಳ್ಳಿ ವೀರಪ್ಪ ವಿಶಿಷ್ಟ ಪ್ಲಾಸ್ಟಿಕ್ ಅಭಿಯಾನ ಸುದ್ದಿ
ತಾವಾಯ್ತು ತಮ್ಮ ಕೆಲಸವಾಯ್ತು ಅನ್ನೊ ಜನರ ನಡುವೆ ಉತ್ತಮ ಉದ್ಯೋಗವಿದ್ರೂ, ಸಮಾಜಮುಖಿ ಭಾವನೆ ಹೊಂದಿರುವ ಹುಬ್ಬಳ್ಳಿಯ ಇಂಜಿನಿಯರ್ ವಿರೇಶ್ ಅವರು, ತಮ್ಮ ವಿಶಿಷ್ಟ ಪ್ಲಾಸ್ಟಿಕ್ ಅಭಿಯಾನದ ಮೂಲಕ ಜನ ಜಾಗೃತಿ ಮೂಡಿಸುತ್ತಿದ್ದಾರೆ. ಈ ಮೂಲಕ ಎಲ್ಲರ ಮೆಚ್ಚುಗೆ ಪಡೆದಿದ್ದಾರೆ. ಮೊದಮೊದಲು ಕುಟುಂಬದವರು ಸೇರಿದಂತೆ ಎಲ್ಲರೂ ಮೂದಲಿಸಿದ್ದರು. ಆದ್ರೆ ಸದ್ಯ ಇವರ ಕಾರ್ಯಕ್ಕೆ ಜನರೇ ಕೈ ಜೋಡಿಸಿರುವುದು ವಿಶೇಷ. ಈ ಕುರಿತು ಈಟಿವಿ ಭಾರತ ಜೊತೆ ವಿರೇಶ್ ಅರಕೇರೆ ಮುಕ್ತವಾಗಿ ಮಾತನಾಡಿದ್ದಾರೆ.