ಹುಬ್ಬಳ್ಳಿಯಲ್ಲಿ ಲಾಕ್‌ಡೌನ್ ನಡುವೆಯೂ ರಸ್ತೆಗಿಳಿಯುತ್ತಿವೆ ವಾಹನಗಳು.. - hubli latest news
ಹುಬ್ಬಳ್ಳಿ: ಲಾಕ್‌ಡೌನ್ ಆದೇಶಕ್ಕೆ ವಾಣಿಜ್ಯ ನಗರಿ ಜನ ಡೋಂಟ್‌ಕೇರ್ ಎನ್ನುತ್ತಿದ್ದಾರೆ. ನಿಷೇಧದ ನಡುವೆಯೂ ಜನರ ಓಡಾಟ ಮತ್ತೆ ಮುಂದುವರೆದಿದೆ. ಇಷ್ಟು ದಿನ ತರಕಾರಿ ಮಾರುಕಟ್ಟೆ ಖರೀದಿಗೆ ಮಾತ್ರ ಮುಗಿ ಬೀಳುತ್ತಿದ್ದ ಜನ ಇಂದು ನಗರದ ಚೆನ್ನಮ್ಮವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ ಸೇರಿ ಪ್ರಮುಖ ರಸ್ತೆಗಳಲ್ಲಿ ಓಡಾಡುತ್ತಿದ್ದಾರೆ. ಬೆಳಗ್ಗೆಯಿಂದಲೇ ರಸ್ತೆಗೆ ಎಂಟ್ರಿ ಕೊಟ್ಟ ಖಾಸಗಿ ವಾಹನ ಸೇರಿ ಕಾರು, ಬೈಕ್ ಸವಾರರು ಎಲ್ಲೆಂದರಲ್ಲಿ ಓಡಾಡುತ್ತಿದ್ದಾರೆ. ಪ್ರಮುಖ ರಸ್ತೆಗಳಲ್ಲಿ ಪೊಲೀಸ್ ಸಿಬ್ಬಂದಿ ಇಲ್ಲದ ಕಾರಣ ಸವಾರರ ಸಂಖ್ಯೆ ಹೆಚ್ಚಿದೆ.