ನಡು ಬೀದಿಯಲ್ಲೇ ಗುಟ್ಕಾಕ್ಕಾಗಿ ಹೊಡೆದಾಡಿಕೊಂಡ ಯುವಕರು: ವಿಡಿಯೋ - ಹುಬ್ಬಳ್ಳಿ
ಹುಬ್ಬಳ್ಳಿ: ಗುಟ್ಕಾಕ್ಕಾಗಿ ಹೊಡೆದಾಡಿರುವ ಘಟನೆ ಹುಬ್ಬಳ್ಳಿಯ ಬಾರದಾನ ಸಾಲ್ ಏರಿಯಾದಲ್ಲಿ ನಡೆದಿದೆ. ಕರ್ಫ್ಯೂ ಹಿನ್ನೆಲೆ ಅಂಗಡಿ ಮುಂಗಟ್ಟುಗಳು ಬಂದಾಗಿದ್ದು, ಇದನ್ನೇ ಬಂಡವಾಳ ಮಾಡಿಕೊಂಡ ಕೆಲವರು ದುಪಟ್ಟು ದರಕ್ಕೆ ಗುಟ್ಕಾ ಮಾರುತ್ತಿದ್ದಾರೆ. ಹೀಗಾಗಿ ಗುಟ್ಕಾ ಕೊಳ್ಳಲು ಬಂದ ನಾಲ್ಕೈದು ಯುವಕರು ಹಾಗೂ ಅಂಗಡಿ ಮಾಲೀಕರ ನಡುವೆ ಮಾತಿಗೆ ಮಾತು ಬೆಳೆದು ಹೊಡೆದಾಡಿಕೊಂಡಿದ್ದಾರೆ. ಗುಟ್ಕಾ ಪ್ರಿಯರ ಈ ಬೀದಿ ಕಾಳಗವನ್ನು ಸ್ಥಳೀಯರು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದು, ವಿಡಿಯೋ ವೈರಲ್ ಆಗಿದೆ. ಘಟನಾ ಸ್ಥಳಕ್ಕೆ ಘಂಟಿಕೇರಿ ಪೊಲೀಸರು ಭೇಟಿ ನೀಡಿ ಜಗಳ ತಿಳಿಗೊಳಿಸಿ ಯುವಕರಿಗೆ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.