ಆಹಾರಕ್ಕಾಗಿ ಹಾತೊರೆಯುತ್ತಿವೆ ಮೂಕ ಪ್ರಾಣಿಗಳು; ಕೊರೊನಾ ಕ್ರೌರ್ಯಕ್ಕೆ ಸಾಕ್ಷಿ ಎಂಬಂತಿದೆ ಈ ದೃಶ್ಯ - ಲಾಕ್ಡೌನ್ ಪರಿಣಾಮ
ಕೊರೊನಾ ವೈರಾಣು ಪ್ರಾಣಿಗಳಿಗೆ ಹರಡುವುದಿಲ್ಲ ಎಂದರೂ ಮೂಕ ಪ್ರಾಣಿಗಳು ಹಸಿವಿನಿಂದ ಬಳಲುವಂತೆ ಮಾಡಿದೆ. ಲಾಕ್ಡೌನ್ ಘೋಷಣೆ ಹಿನ್ನೆಲೆಯಲ್ಲಿ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಮಂಗಗಳು ಆಹಾರವಿಲ್ಲದೆ ಪರದಾಡುತ್ತಿವೆ. ಕೋತಿಯೊಂದು ತನ್ನ ಮಗುವನ್ನು ಉದರದಲ್ಲಿ ಹೊತ್ತುಕೊಂಡು ನೆಲದ ಮೇಲೆ ಬಿದ್ದಿದ್ದ ಹಾಲು ನೆಕ್ಕುತ್ತಿದ್ದ ದೃಶ್ಯ ಕ್ರೂರ ವಿಧಿಯಾಟಕ್ಕೆ ಸಾಕ್ಷಿ.