ರಾತ್ರೋರಾತ್ರಿ ಪಾಲಿಕೆ ವಾಹನಗಳ ಬ್ಯಾಟರಿ ಎಗರಿಸಿದ ಖದೀಮರು..! - Motor Vehicles batery theft news hubli
ಹುಬ್ಬಳ್ಳಿ: ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಕಸ ಸಂಗ್ರಹಣೆಯ ಟಿಪ್ಪರ್ ವಾಹನಗಳ ಬ್ಯಾಟರಿಯನ್ನು ಕಳ್ಳತನ ಮಾಡಿರುವ ಘಟನೆ ನಗರದ ನ್ಯೂ ಇಂಗ್ಲಿಷ್ ಸ್ಕೂಲ್ ಹತ್ತಿರ ನಡೆದಿದೆ. ರಾತ್ರಿ ಪಾಲಿಕೆ ಸಿಬ್ಬಂದಿ ತಮ್ಮ ಕೆಲಸ ಮುಗಿದ ನಂತರ ವಲಯ ಕಚೇರಿ 11 ರಲ್ಲಿ ನಿಲ್ಲಿಸಿ ಹೋಗಿದ್ದು, ಖದೀಮರು ರಾತ್ರೋರಾತ್ರಿ ಇಲ್ಲಿನ ಸುಮಾರು 9 ವಾಹನಗಳ ಬ್ಯಾಟರಿಯನ್ನು ಕಳ್ಳತನ ಮಾಡಿದ್ದಾರೆ. ಈ ಕುರಿತು ಕಸಬಾಪೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.