ನಾಳೆಯ ಕರ್ನಾಟಕ ಬಂದ್ಗೆ ಹುಬ್ಬಳ್ಳಿ ಜನ ಏನಂದ್ರು ಗೊತ್ತಾ? - Karnataka Bandh Latest News
ಹುಬ್ಬಳ್ಳಿ: ಮರಾಠ ಅಭಿವೃದ್ಧಿ ನಿಗಮ ರಚನೆ ವಿರೋಧಿಸಿ ನಾಳೆ ಕರೆ ನೀಡಿರುವ ಕನ್ನಡಪರ ಹೋರಾಟಗಾರರ ಬಂದ್ಗೆ ಹುಬ್ಬಳ್ಳಿ ಜನತೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೊರೊನಾ ಸಂದರ್ಭದಲ್ಲಿ ಆರ್ಥಿಕ ಸಂಕಷ್ಟ ಅನುಭವಿಸಿದ ಕರ್ನಾಟಕದ ಜನತೆಗೆ ಮತ್ತೆ ಬಂದ್ ಅಂದರೆ ಹೇಗೆ? ಆರ್ಥಿಕವಾಗಿ ಸುಧಾರಿಸಿಕೊಳ್ಳವಷ್ಟರಲ್ಲಿ ಮತ್ತೆ ಒಂದು ದಿನ ಬಂದ್ ಮಾಡಿದರೆ ಏನು ಪ್ರಯೋಜನ? ಹೋರಾಟದ ಮೂಲಕ ಬೇಡಿಕೆಗಳನ್ನು ಈಡೇರಿಸಕೊಳ್ಳಬೇಕು, ಅದು ಬಿಟ್ಟು ಪ್ರತಿಯೊಂದಕ್ಕೂ ಬಂದ್ ಮಾಡುವುದು ಸೂಕ್ತವಲ್ಲ ಎಂದಿದ್ದಾರೆ.