ಕರ್ನಾಟಕ

karnataka

ETV Bharat / videos

ಮಳೆ ನಿಂತರೂ ಅನಾಹುತಗಳು ನಿಂತಿಲ್ಲ... ಚಾವಣಿ ಕುಸಿವ ಈ ವೀಡಿಯೊ ವೈರಲ್​​​ - ಮನೆಯ ಮೇಲ್ಚಾವಣಿ ಕುಸಿದು

By

Published : Aug 12, 2019, 6:25 PM IST

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದೆ. ಆದರೇ, ಮಳೆ ನಿಂತರೂ ಅನಾಹುತಗಳು ನಡೆಯುತ್ತಿರುವುದು ಮಾತ್ರ ನಿಂತಿಲ್ಲ. ನೋಡ ನೋಡುತ್ತಿದ್ದಂತೆಯೇ ಮನೆಯ ಚಾವಣಿ ಕುಸಿದು ಬಿದ್ದಿರುವ ದೃಶ್ಯವಂತೂ ನಿಜಕ್ಕೂ ಎದೆಯನ್ನು ನಡುಗಿಸುವಂತಿದೆ. ಎನ್ ಆರ್ ಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿ ಈ ಘಟನೆ ನಡೆದಿದ್ದು, ಮಳೆಯಿಂದಾಗಿ ನದಿಯಲ್ಲಿ ನೀರು ಹೆಚ್ಚಾಗಿ ಶಿಥಿಲಾವಸ್ಥೆ ತಲುಪಿದ್ದ ಮನೆ ಕುಸಿದು ಬಿದ್ದಿದೆ. ಈ ದೃಶ್ಯವನ್ನು ನೋಡಿ ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ. ಮಹಾ ಮಳೆಗೆ ಮಲೆನಾಡು ಭಾಗದ ಬಾಳೆಹೊನ್ನೂರಿನಲ್ಲಿ 112 ಮನೆಗಳು, ಮಾಗುಂಡಿ ಗ್ರಾಮದಲ್ಲಿ 53 ಮನೆಗಳು, ಕಳಸ ಹೋಬಳಿಯಲ್ಲಿ 123 ಮನೆಗಳು ಹಾಳಾಗಿ ವಾಸ ಮಾಡಲೂ ಯೋಗ್ಯವಿಲ್ಲದ ಸ್ಥಿತಿಯನ್ನು ತಲುಪಿವೆ.

ABOUT THE AUTHOR

...view details