ಸತತ ಮಳೆಯಿಂದ ಕುಸಿದು ಬಿದ್ದ ಮನೆ; ವೃದ್ಧೆಯ ರಕ್ಷಣೆ - ಸಾರ್ವಜನಿಕ ಆಸ್ತಿಪಾಸ್ತಿ ಹಾನಿ
ಧಾರವಾಡ (ಅಣ್ಣಿಗೇರಿ): ಜಿಲ್ಲೆ ಸೇರಿದಂತೆ ಹಲವೆಡೆ ಭಾರಿ ಮಳೆ ಸುರಿದಿದೆ. ಪರಿಣಾಮ ಅಪಾರ ಪ್ರಮಾಣದಲ್ಲಿ ಹಾನಿ ಉಂಟಾದ ವರದಿಯಾಗಿದೆ. ಸತತ ಮಳೆಯಿಂದ ಅಣ್ಣಿಗೇರಿ ಪಟ್ಟಣದ ಹೊರಕೇರಿ ಓಣಿಯಲ್ಲಿ ಮನೆಯೊಂದು ಕುಸಿದು ಬಿದ್ದಿದ್ದು ಮನೆಯಲ್ಲಿ ಸಿಲುಕಿದ್ದ ವೃದ್ಧೆಯೋರ್ವಳನ್ನು ಸ್ಥಳೀಯರು ರಕ್ಷಿಸಿ ಹೊರತಂದಿದ್ದಾರೆ. ಘಟನೆಯಲ್ಲಿ ವೃದ್ಧೆ ಶಾರಮ್ಮ ಗೌಡರ್ಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.