ಉಡುಪಿಯಲ್ಲಿ ಮಳೆ ಅವಾಂತರ: ನೋಡ ನೋಡುತ್ತಲೇ ಕುಸಿದು ಬಿತ್ತು ಮನೆ - ಭಾರೀ ಮಳೆಗೆ ಉಡುಪಿಯಲ್ಲಿ ಮನೆ ಕುಸಿತ
ಉಡುಪಿ: ಜಿಲ್ಲೆಯಲ್ಲಿ ಎರಡು ದಿನಗಳ ಕಾಲ ಅವಾಂತರ ಸೃಷ್ಟಿಸಿದ್ದ ವರುಣನ ಅಬ್ಬರ ಕೊಂಚ ಕಮ್ಮಿಯಾಗಿದೆ. ಆದರೆ, ಮಳೆ ಸೃಷ್ಟಿಸಿದ ಹಾನಿಯಿಂದ ಜನ ಕಂಗಾಲಾಗಿದ್ದಾರೆ. ನೀರಲ್ಲಿ ಮುಳುಗಿದ್ದ ಮನೆಗಳು ಒಂದೊಂದಾಗಿ ಕುಸಿಯುಲು ಪ್ರಾರಂಭಿಸಿವೆ. ಸಂಪೂರ್ಣ ಜಲಾವೃತವಾಗಿದ್ದ ಪುತ್ತಿಗೆಯ ಉದಯ ಕುಲಾಲ್ ಎಂಬವರ ಮನೆ ನೀರು ಕಡಿಮೆಯಾದ ಮೇಲೆ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಮನೆಯವರು ಬೇರೆ ಕಡೆ ಸ್ಥಳಾಂತರವಾಗಿದ್ದರಿಂದ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಇನ್ನೂ, ಹಲವು ಪ್ರದೇಶಗಳಲ್ಲಿ ಕೂಡ ಇದೇ ರೀತಿ ಮನೆಗಳು ಕುಸಿಯುತ್ತಿವೆ.