ಶಿವಮೊಗ್ಗದಲ್ಲಿ ಮಾಲೀಕನ ಕಣ್ಣೆದುರೇ ಧರೆಗುರುಳಿತು ಮನೆ...! - ಮನೆ ಕುಸಿತ
ಶಿವಮೊಗ್ಗ: ಕಳೆದ ಐದು ದಿನಗಳಿಂದ ಸುರಿಯುತ್ತಿದ್ದ ಭಾರಿ ಮಳೆಗೆ ಇಲ್ಲಿನ ವಿದ್ಯಾನಗರದ ಮಾತಗಮ್ಮಾ ನಿವಾಸಿ ಮಂಜುನಾಥ್ ಎಂಬುವರ ಮನೆ ಮಾಲೀನ ಕಣ್ಮುಂದೆದೆಯೇ ಧರೆಗುರುಳಿದೆ. ಮನೆಯಲ್ಲಿ ನಾಲ್ಕು ಜನ ವಾಸವಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಮನೆಯಲ್ಲಿದ್ದ ಪೀಠೋಪಕರಣಗಳಿಗೆ ಹಾನಿಯಾಗಿದೆ. ಹೀಗಾಗಿ ಮಂಜುನಾಥ್ ಕುಟುಂಬ ಪಕ್ಕದ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ.