ಹಾಸ್ಟೆಲ್ ಮತ್ತು ವಸತಿಶಾಲೆಗಳ ಹೊರಗುತ್ತಿಗೆ ನೌಕರರ ಸಂಘದಿಂದ ಪ್ರತಿಭಟನೆ - ಪ್ರತಿಭಟನ ರ್ಯಾಲಿ
ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರಿ ಹಾಸ್ಟೆಲ್ ಮತ್ತು ವಸತಿಶಾಲೆಗಳ ಹೊರಗುತ್ತಿಗೆ ನೌಕರರ ಸಂಘದ ಕಅರ್ಯಕರ್ತರು ನಗರದ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಫ್ರೀಡಂ ಪಾರ್ಕ್ ವರೆಗೆ ಪ್ರತಿಭಟನಾ ಜಾಥ ನಡೆಸಿದರು. ಸರ್ಕಾರಿ ನಿಲಯಗಳ ಹೊರಗುತ್ತಿಗೆ ಸಿಬ್ಬಂದಿಗಳನ್ನು ಸೇವೆಯಲ್ಲಿ ಮುಂದುವರೆಸಬೇಕು ಹಾಗೂ 10 ತಿಂಗಳ ವೇತನವನ್ನ ಕೊಡಬೇಕೆಂದು ಒತ್ತಾಯಿಸಿ ಹಾಸ್ಟೆಲ್ ನೌಕರರು ಪ್ರತಿಭಟನೆ ನಡೆಸಿದ್ದಾರೆ. 20 ವರ್ಷಗಳಿಂದ ಹಾಸ್ಟೆಲ್ಗಳಲ್ಲಿ ಹೊರಗುತ್ತಿಗೆ ಮೇಲೆ ಕಾರ್ಯ ನಿರ್ವಹಿಸುತ್ತಿದ್ದೇವೆ. ಈಗ ಎಲ್ಲರನ್ನ ಕೆಲಸದಿಂದ ವಜಾಗೊಳಿಸಿ ಸರ್ಕಾರ ಬೇರೆ ಸಿಬ್ಬಂದಿಯನ್ನು ನೇಮಕ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
TAGGED:
ಪ್ರತಿಭಟನ ರ್ಯಾಲಿ