ಟಿಕ್‌ಟಾಕ್ ವಿಡಿಯೋದಿಂದಲೇ ಬಳ್ಳಾರಿ ಯುವಕರಿಂದ ಕೊರೊನಾ ಜಾಗೃತಿ!! - ಕೊರೊನಾ ವೈರಸ್
ಬಳ್ಳಾರಿ ಜಿಲ್ಲೆ ಹೊಸಪೇಟೆ ತಾಲೂಕಿನ ಮೈ ಜೈನ್ ಅಂಡ್ ಟೀಮ್ ಹೊಸಪೇಟೆ ತಂಡದ ಯುವಕರು ಕೊರೊನಾ ವೈರಸ್ ಕುರಿತು ಜನರಿಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಈವರೆಗೂ 10 ಟಿಕ್ ಟಾಕ್ ವಿಡಿಯೋ ಮಾಡಿ ಮಹಾಮಾರಿ ಕುರಿತಂತೆ ಸಾಮಾಜಿಕ ಜಾಲತಾಣಗಳ ಮೂಲಕ ಅರಿವು ಮೂಡಿಸುತ್ತಿದ್ದಾರೆ. ಇದನ್ನು ಲಕ್ಷಗಟ್ಟಲೆ ಜನ ವೀಕ್ಷಣೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.