ರಾಜ್ಯ ಉಪಚುನಾವಣೆ ಮತದಾನಕ್ಕೆ ದಿನಗಣನೆ... ಹೊಸಕೋಟೆಯಲ್ಲಿ ಅಭ್ಯರ್ಥಿಗಳ ಬಿರುಸಿನ ಪ್ರಚಾರ - ಹೊಸಕೋಟೆ ಚುನಾವಣಾ ಪ್ರಚಾರ ಸುದ್ದಿ
ರಾಜ್ಯ ಉಪ ಚುನಾವಣೆಯಲ್ಲಿ ಹೈವೊಲ್ಟೆಜ್ ಕ್ಷೇತ್ರವಾಗಿ ಹೊರ ಹೊಮ್ಮಿರುವ ಹೊಸಕೋಟೆ ವಿಧಾನ ಸಭೆ ಕ್ಷೇತ್ರದಲ್ಲಿ ವಾಗ್ವಾದ,ಆರೋಪ, ಪ್ರತ್ಯಾರೋಪ,ಹೊಗಳಿಕೆ ಜತೆ ತೆಗಳಿಕೆ ತುಸು ಹೆಚ್ಚಾಗಿ ಕೇಳಿ ಬರ್ತಿವೆ. ಕಮಲ ಬಿಟ್ಟ ಅಭ್ಯರ್ಥಿ ಒಂದೆಡೆಯಾದ್ರೆ, ಕೈ ಬಿಟ್ಟು ಕಮಲ ಹಿಡಿದವರು ಇನ್ನೊಂದೆಡೆ. ಇದರ ಮಧ್ಯೆ ನಾನೇನು ಕಮ್ಮಿಯಿಲ್ಲ ಅಂತ ತೆನೆ ಹೊತ್ತ ಮಹಿಳೆ ಬೇರೆ. ಈ ಮೂವರು ಸದ್ಯ ಕ್ಷೇತ್ರದಲ್ಲಿ ಭರ್ಜರಿ ಪ್ರಚಾರ ನಡೆಸಿ ಮತದಾರನ್ನು ತನ್ನತ್ತ ಸೇಳೆಯುವ ಪ್ರಯತ್ನದಲ್ಲಿದ್ದಾರೆ.