ಮಲೆನಾಡಿನಲ್ಲಿ ಸರಳವಾಗಿ ನಡೆದ ಹೋರಿ ಬೆದರಿಸುವ ಸ್ಪರ್ಧೆ - ಹಬ್ಬಕೆಂದೇ ತಮಿಳುನಾಡಿನಿಂದ ಹೋರಿ
ಶಿಕಾರಿಪುರ ತಾಲೂಕಿನ ಶಿರಿಹಳ್ಳಿ ತಾಂಡ ಹಾಗೂ ಶೀರಿಹಳ್ಳಿ ಗ್ರಾಮದಲ್ಲಿ ಹೋರಿ ಬೆದರಿಸುವ ಹಬ್ಬವನ್ನ ಕೊರೊನಾ ಇರುವ ಕಾರಣ ಸರಳವಾಗಿ ಆಚರಿಸಲಾಯಿತು. ಹಬ್ಬಕೆಂದೇ ತಮಿಳುನಾಡಿನಿಂದ ಹೋರಿಗಳನ್ನು ಲಕ್ಷಾಂತರ ರೂಪಾಯಿ ಕೊಟ್ಟು ತಂದು ಕೆಲ ತಿಂಗಳುಗಳ ಕಾಲ ಅವುಗಳಿಗೆ ತರಬೇತಿ ನೀಡಲಾಗುತ್ತದೆ. ದೀಪಾವಳಿ ಹಬ್ಬದ ನಂತರದ ದಿನಗಳಲ್ಲಿ ಹೋರಿ ಹಬ್ಬವನ್ನು ಆಚರಿಸುತ್ತಾರೆ. ಹೋರಿಗಳ ಕೊರಳಿಗೆ ಕೊಬ್ಬರಿ, ಬಲೂನ್ ಕಟ್ಟಿ ಶೃಂಗರಿಸಿ ಅಖಾಡದಲ್ಲಿ ಬಿಡಲಾಗುತ್ತದೆ.