ಭಾರಿ ಹೋರಿ ಬೆದರಿಸುವ ಸ್ಫರ್ಧೆ: ರಾಸುಗಳ ಶರವೇಗದ ಓಟ - ಲೆಟೆಸ್ಟ್ ಹೋರಿ ಹಬ್ಬ ಸುದ್ದಿ
ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಯಲವಳ್ಳಿ ಗ್ರಾಮದಲ್ಲಿ ಭಾರಿ ಹೋರಿ ಬೆದರಿಸುವ ಸ್ಪರ್ಧೆ ಆಯೋಜಿಸಲಾಗಿತ್ತು. ಇದರಲ್ಲಿ 280ಕ್ಕೂ ಹೆಚ್ಚು ಹೋರಿಗಳು ಭಾಗವಹಿಸಿದ್ದವು. ಪ್ರತೀ ಹೋರಿಗಳ ಕೊರಳಿಗೆ ಕೊಬ್ಬರಿ ಕಟ್ಟಿ, ಬಲೂನ್, ಹೂಗಳಿಂದ ಶೃಂಗರಿಸಲಾಗಿತ್ತು. ಅಷ್ಟೇ ಅಲ್ಲದೇ, ವಿವಿಧ ಊರುಗಳಿಂದ ಆಗಮಿಸಿದ್ದ ಹೋರಿಗಳಿಗೆ ಪೈಲ್ವಾನ್, ಗೌಡ್ರ ಗೂಳಿ, ನಾಯ್ಕರ್ ಗೂಳಿ, ಕಂಸ, ರಾಕ್ಷಸ, ಅಶ್ವಮೇಧ, ದೇವರ ಮಗ, ಡೇಂಜರ್ ಗೂಳಿ, ನಾಗರಹಾವು ಹೀಗೆ ಹಲವಾರು ಹೆಸರು ಹೊಂದಿರುವ ಹೋರಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ಆ ಹೋರಿಗಳ ಶರವೇಗದ ಓಟ ನೋಡಲು ಸಾವಿರಾರು ಜನ ಸೇರಿದ್ದರು.