ಗಲ್ವಾನ್ ಕಣಿವೆಯಲ್ಲಿ ವೀರಮರಣ ಹೊಂದಿದ ಯೋಧರಿಗೆ ಮಣ್ಣಿನ ಕಲಾಕೃತಿ ಮೂಲಕ ಗೌರವ - ಲಡಾಕ್ನಲ್ಲಿ ವೀರಮರಣ ಹೊಂದಿದ ಯೋಧ
ಲಡಾಕ್ನಲ್ಲಿ ಭಾರತ ಹಾಗು ಚೀನಾ ಯೋಧರ ನಡುವೆ ನಡೆದ ಘರ್ಷಣೆಯಲ್ಲಿ ಹುತಾತ್ಮರಾದ ಭಾರತೀಯ ಯೋಧರಿಗೆ ಕಲಾವಿದರೊಬ್ಬರು ವಿಶೇಷ ರೀತಿಯಲ್ಲಿ ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ಮಣ್ಣಿನಲ್ಲಿ ಯೋಧರ ಕಲಾಕೃತಿ ರಚಿಸಿರುವ ಧಾರವಾಡದ ಕೆಲಗೇರಿಯ ಪರಿಸರಸ್ನೇಹಿ ಕಲಾವಿದ ಮಂಜುನಾಥ ಹಿರೇಮಠ ವಿಶೇಷ ಗೌರವಾರ್ಪಣೆ ಸಲ್ಲಿಸಿದ್ದಾರೆ.