ಕರ್ನಾಟಕ

karnataka

ETV Bharat / videos

ಹುತಾತ್ಮ ಯೋಧ ಶಿವಾನಂದಗೆ ಕ್ಯಾಂಡಲ್ ಮಾರ್ಚ್ ಮೂಲಕ ಗೌರವ - Honor to the martyr Shivananda through the Candle March

By

Published : Sep 1, 2020, 10:52 PM IST

ಮುದ್ದೇಬಿಹಾಳ (ವಿಜಯಪುರ): ಜಮ್ಮು- ಕಾಶ್ಮೀರದಲ್ಲಿ ವಿದ್ಯುತ್ ಅವಘಡದಿಂದ ಹುತಾತ್ಮರಾದ ತಾಲೂಕಿನ ಬಸರಕೋಡ ಗ್ರಾಮದ ಯೋಧ ಶಿವಾನಂದ ಬಡಿಗೇರ ಅವರ ಆತ್ಮಕ್ಕೆ ಶಾಂತಿ ಕೋರಿ, ಗ್ರಾಮಸ್ಥರು ಗ್ರಾಮದಲ್ಲಿ ಮೇಣದಬತ್ತಿ ಹಿಡಿದುಕೊಂಡು ಮೆರವಣಿಗೆ ನಡೆಸಿದರು. ಗ್ರಾಮದ ಬಸವೇಶ್ವರ ವೃತ್ತದಿಂದ ಪವಾಡ ಬಸವೇಶ್ವರ ದೇವಸ್ಥಾನಕ್ಕೆ ಕಾಲ್ನಡಿಗೆಯಲ್ಲಿ ಮೆರವಣಿಗೆ ಮೂಲಕ ತೆರಳಿದರು. ಯೋಧ ಶಿವಾನಂದ ಅವರ ಪಾರ್ಥೀವ ಶರೀರ ಬುಧವಾರ ಗ್ರಾಮಕ್ಕೆ ಆಗಮಿಸಲಿದೆ.

ABOUT THE AUTHOR

...view details