ಪರೇಡ್ ಮಾಡುವಾಗ ಹೆಜ್ಜೇನು ದಾಳಿ : 20ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಾಯ - 20ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಾಯ
ಹಾವೇರಿ: ಹೆಜ್ಜೇನು ದಾಳಿಯಿಂದ ಇಪ್ಪತ್ತಕ್ಕೂ ಅಧಿಕ ವಿದ್ಯಾರ್ಥಿಗಳು ಅಸ್ವಸ್ಥಗೊಂಡಿರುವ ಘಟನೆ ನಗರದ ಜಿ.ಎಚ್.ಕಾಲೇಜು ಬಳಿ ನಡೆದಿದೆ. ಎನ್ಸಿಸಿ ಪರೇಡ್ ಮಾಡುವಾಗ ವಿದ್ಯಾರ್ಥಿಗಳ ಮೇಲೆ ಹೆಜ್ಜೇನಿನ ಗುಂಪು ದಾಳಿ ಮಾಡಿದ್ದು, ವಿದ್ಯಾರ್ಥಿಗಳ ಕೈ,ಕಾಲು, ಸೇರಿದಂತೆ ವಿವಿಧ ದೇಹದ ಭಾಗಗಳಿಗೆ ಕಚ್ಚಿವೆ. ಗಾಯಗೊಂಡವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.