ಹುಬ್ಬಳ್ಳಿಯಲ್ಲಿ ಭಾರಿ ಮಳೆಗೆ ಕುಸಿದ ಮನೆ ಗೋಡೆ: ತಪ್ಪಿದ ದುರಂತ - Heavy rain in Hubli
ಹುಬ್ಬಳ್ಳಿ: ನಿರಂತರ ಮಳೆಯಿಂದಾಗಿ ಮನೆ ಗೋಡೆ ಕುಸಿದಿರುವ ಘಟನೆ ಇಂದು ಬೆಳಗ್ಗೆ ನಗರದ ಉಣಕಲ್ ಗ್ರಾಮದ ಸಾಯಿನಗರದಲ್ಲಿ ಸಂಭವಿಸಿದೆ. ಸಾಯಿನಗರ ನಿವಾಸಿ ಕಲ್ಲಪ್ಪ ಸೊಲಬಪ್ಪ ನವಲಗುಂದ ಎಂಬುವರ ಮನೆ ನಿರಂತರ ಮಳೆಯಿಂದಾಗಿ ಕುಸಿದಿದೆ. ಅದೃಷ್ಟವಶಾತ್ ಕುಟುಂಬಸ್ಥರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ ಪರಿಹಾರ ನೀಡುವಂತೆ ಕುಟುಂಬಸ್ಥರು ಮನವಿ ಮಾಡಿದ್ದಾರೆ.