ನೋಡ ನೋಡುತ್ತಿದ್ದಂತೆ ಧರೆಗುರುಳಿದ ಮನೆ: ಮೊಬೈಲ್ನಲ್ಲಿ ವಿಡಿಯೋ ಸೆರೆ - wall collapses in Dharwad due to rain
ಧಾರವಾಡ: ನೋಡ ನೋಡುತ್ತಿದ್ದಂತೆ ಮನೆಯೊಂದು ಧರೆಗುರುಳಿದ ಘಟನೆ ನಗರದ ಕಮಲಾಪುರದಲ್ಲಿ ನಡೆದಿದೆ. ಕಳೆದ ಎರಡು ದಿನಗಳಿಂದ ಸುರಿದ ಮಳೆಗೆ ಮಣ್ಣಿನ ಗೋಡೆ ಧರೆಗುರುಳಿದೆ. ಮನೆ ಬೀಳುತ್ತಿದ್ದಂತೆ ಮನೆಯಲ್ಲಿದ್ದವರು ಹೊರಗಡೆ ಓಡಿ ಬಂದಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ. ಇನ್ನೂ ಈ ಘಟನೆ ನಡೆಯುವ ವೇಳೆ ಅಲ್ಲಿದ್ದ ಯುವಕರು ತಮ್ಮ ಮೊಬೈಲ್ ನಲ್ಲಿ ದೃಶ್ಯ ಸೆರೆ ಹಿಡಿದ್ದಿದ್ದಾರೆ.