ಮೂರು ದಿನ ಸರ್ಕಾರಿ ರಜೆ: ಚಾಮುಂಡಿ ಬೆಟ್ಟಕ್ಕೆ ಹರಿದು ಬಂದ ಭಕ್ತಸಾಗರ - thousands of devotees visits to chamundi temple
ಮೈಸೂರು: ದೀಪಾವಳಿ ಹಬ್ಬದ ನಿಮಿತ್ತ ಮೂರು ದಿನಗಳ ಸರ್ಕಾರಿ ರಜೆ ದೊರೆತಿರುವ ಹಿನ್ನೆಲೆ ತಾಯಿ ಚಾಮುಂಡೇಶ್ವರಿ ದರ್ಶನಕ್ಕೆ ಭಕ್ತಸಾಗರವೇ ಹರಿದು ಬರುತ್ತಿದೆ. ಸರತಿ ಸಾಲಿನಲ್ಲಿ ನಿಂತು ಭಕ್ತರು ದೇವಿಯ ದರ್ಶನ ಪಡೆಯುತ್ತಿದ್ದಾರೆ. ಬಹಳ ದಿನಗಳ ನಂತರ ಚಾಮುಂಡಿ ಸನ್ನಿಧಿಗೆ ಭಕ್ತಾದಿಗಳ ಹಾಗೂ ಪ್ರವಾಸಿಗರ ಸಂಖ್ಯೆ ಹೆಚ್ಚಿದೆ. ಜಿಲ್ಲಾಡಳಿತವು ಕೋವಿಡ್ ನಿಯಂತ್ರಣ ಹಿನ್ನೆಲೆಯಲ್ಲಿ ಹಬ್ಬದ ದಿನಗಳಂದು ಚಾಮುಂಡಿಬೆಟ್ಟಕ್ಕೆ ನಿರ್ಬಂಧ ವಿಧಿಸುತ್ತಿತ್ತು. ಇದೀಗ ಎಲ್ಲಾ ನಿರ್ಬಂಧಗಳು ತೆರವಾಗಿರುವ ಕಾರಣ ಚಾಮುಂಡಿ ಬೆಟ್ಟ ಮೊದಲಿನಂತೆ ಜನರಿಂದ ತುಂಬಿ ತುಳುಕುತ್ತಿದೆ.