ಹಾವೇರಿಯಲ್ಲಿ ಹೋಳಿ ಸಂಭ್ರಮ: ರೇನ್ ಡ್ಯಾನ್ಸ್ಗೆ ಹೆಜ್ಜೆ ಹಾಕಿದ ಯುವಕರು - ಹಾವೇರಿಯಲ್ಲಿ ಹೋಳಿ ಸಂಭ್ರಮ
ಹಾವೇರಿ: ಜಿಲ್ಲಾ ಕೇಂದ್ರ ಹಾವೇರಿಯಲ್ಲಿ ಹೋಳಿ ಸಂಭ್ರಮ ಮನೆ ಮಾಡಿದೆ. ಬಣ್ಣದ ಬಣ್ಣದ ಓಕುಳಿ ಎರಚಿ ಜನರು ಸಂಭ್ರಮಿಸಿದರು. ಕೆಲವೆಡೆ ಯುವಕರಿಗೆ ರೇನ್ ಡ್ಯಾನ್ಸ್ ಆಯೋಜಿಸಿದ್ದು, ಯುವಕರು ಸಂಗೀತಕ್ಕೆ ತಕ್ಕಂತೆ ಹೆಜ್ಜೆ ಹಾಕಿದರು. ದ್ವಿಚಕ್ರವಾಹನ ಸವಾರರು ನಗರದ ವಿವಿಧಡೆ ಸಂಚರಿಸಿ ಬಣ್ಣದಲ್ಲಿ ಮಿಂದೆದ್ದರು. ಬಳಿಕ ಸಾರ್ವಜನಿಕ ಸ್ಥಳಗಳಲ್ಲಿ ಸ್ಥಾಪಿಸಿದ್ದ ಕಾಮ-ರತಿ ದಹನ ಮಾಡಲಾಯಿತು. ಕೊರೊನಾ ಹೆಚ್ಚುತ್ತಿರುವ ಹಿನ್ನೆಲೆ ಈ ಬಾರಿ ಹೆಚ್ಚು ಜನ ಸೇರುವ ಬಂಡಿಗಳ ಮೆರವಣಿಗೆ ರದ್ದು ಮಾಡಲಾಗಿತ್ತು.