ಕೊರೊನಾ ವೈರಸ್ ಪ್ರತಿಕ್ರತಿ ದಹಿಸಿ ಹೋಳಿ ಉತ್ಸವ... ಬಾಗಲಕೋಟೆ ಜನತೆಯಿಂದ ವಿಶಿಷ್ಟ ಕಾಮದಹನ
ಹೋಳಿ ಉತ್ಸವ ಅಂಗವಾಗಿ ಬಾಗಲಕೋಟೆ ನಗರದಲ್ಲಿ ವಿಶೇಷ ರೀತಿಯಲ್ಲಿ ಕಾಮ ದಹನ ಮಾಡಲಾಗುತ್ತದೆ. ಐತಿಹಾಸಿಕ ಹಿನ್ನೆಲೆ ಹೊಂದಿರುವ ಹೋಳಿ ಹಬ್ಬದ ಸಮಯದಲ್ಲಿ ಗಲ್ಲಿ ಗಲ್ಲಿಯಲ್ಲಿ ಕಾಮ ದಹನ ಮಾಡಲಾಗುತ್ತದೆ. ಆದರೆ ಮಾರವಾಡಿ ಗಲ್ಲಿಯಲ್ಲಿ ವಿಶೇಷ ರೀತಿಯ ಕಾಮದಹನ ಗಮನ ಸೆಳೆದಿದೆ. ಅಂದರೆ ದೇಶದ್ರೋಹಿಗಳು, ಭಯೋತ್ಪಾದಕರು ಮತ್ತು ನಿರ್ಭಯ ಅತ್ಯಾಚಾರ ಆರೋಪಿಗಳ ಭಾವ ಚಿತ್ರ ಹಾಕಿ ಬೆಂಕಿ ಹಚ್ಚಿದರು. ಇದೇ ಸಮಯದಲ್ಲಿ ಮಾರಕ ರೋಗ ಕೊರೊನಾ ವೈರಸ್ ನಾಶ ಆಗಲಿ ಎಂದು ನಾಮ ಫಲಕ ಹಾಗೂ ಇತರ ಮಾರಕವಾದ ರೋಗದಿಂದ ಮುಕ್ತವಾಗಲಿ ಎಂದು ಭಯ ಹುಟ್ಟಿಸುವ ತಲೆ ಬುರುಡೆ ಇಟ್ಟು ದಹನ ಮಾಡಿದರು.ಇಡೀ ಜಗತ್ತಿನ ವೈರಸ್ ಅಂತ್ಯಕಾಣಲಿ ಎಂದು ದಹನ ಮಾಡಿದರೆ, ದೇಶ ದ್ರೋಹಿಗಳು ಸರ್ವನಾಶ ಆಗಲಿ ಎಂದು ಕಾಮ ದಹನ ಮೂಲಕ ಸಂದೇಶ ಸಾರಲಾಯಿತು.