ಕರ್ನಾಟಕ

karnataka

ETV Bharat / videos

ಜೋಡೆತ್ತುಗಳ ಸಾಹಸಮಯ ಓಟ... ಮೈ ಜುಮ್ಮೆನ್ನಿಸುವ ಹೋಳ ಹಬ್ಬ! - Hola festival celebrate in Bidar

By

Published : Sep 1, 2019, 9:18 AM IST

ಬೀದರ್​​​: ಹೋಳ ಹಬ್ಬದ ಪ್ರಯುಕ್ತ ಜೋಡೆತ್ತುಗಳ ಓಟವನ್ನು ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ರಾಜೇಶ್ವರ ಗ್ರಾಮದಲ್ಲಿ ವಿಶಿಷ್ಟವಾಗಿ ಏರ್ಪಡಿಸಲಾಗಿತ್ತು.ಹಬ್ಬದ ನಿಮಿತ್ತ ಈ ಗ್ರಾಮದಲ್ಲಿ ಗ್ರಾಮ ಪಂಚಾಯತ್​​ ವತಿಯಿಂದ ಜೋಡೆತ್ತುಗಳ ಓಟ ನಡೆಯುತ್ತದೆ. ಮಳೆಗಾಲದಲ್ಲಿ ಹಚ್ಚ ಹಸಿರು ಹುಲ್ಲು ಮೆಯ್ದಿರುವ ಎತ್ತುಗಳ ತಾಕತ್ತು ಪ್ರದರ್ಶನ ಮಾಡುವ ಈ ಹಬ್ಬವನ್ನ ಹೋಳ ಹಬ್ಬ ಎನ್ನುತ್ತಾರೆ. ಜಾತೀಯತೆ ಮರೆತು ಹಿಂದೂ-ಮುಸ್ಲಿಂ ಸೇರಿದಂತೆ ಗ್ರಾಮದ ಎಲ್ಲ ರೈತರು ತಮ್ಮ ಎತ್ತುಗಳನ್ನ ಸಿಂಗಾರ ಮಾಡಿ ಒಂದು ಪುಟ್ಟ ಬಂಡಿಯನ್ನ ರೆಡಿ ಮಾಡುತ್ತಾರೆ. ಆ ಬಂಡಿಗೆ ಎತ್ತುಗಳನ್ನ ಹೂಡಿ ಗ್ರಾಮದ ಓಣಿಯಲ್ಲಿ ಮೂರು ಸುತ್ತು ಓಡಿಸಲಾಗುತ್ತೆ. ಆದ್ರೆ ಎತ್ತುಗಳನ್ನು ಓಡಿಸುವಾಗ ಅವುಗಳಿಗೆ ಹೊಡೆಯಬಾರದು. ಎಲ್ಲ ಬಂಡಿಗಳಿಗೆ ಒಂದೊಂದು ನಂಬರ್ ನೀಡಿ, ಅದ್ರರಲ್ಲಿ ಉತ್ತಮವಾಗಿ ಓಡಿದ ಎತ್ತುಗಳಿಗೆ ಪ್ರಥಮ, ದ್ವೀತಿಯ ಬಹುಮಾನವನ್ನ ನೀಡಲಾಗುತ್ತೆ.

ABOUT THE AUTHOR

...view details