ಕರ್ನಾಟಕ

karnataka

ETV Bharat / videos

ಸಿದ್ದರಾಮಯ್ಯ ವಿರುದ್ಧ ಮುಗಿಯದ ಮುನಿಯಪ್ಪ ಮುನಿಸು! - ಬೆಂಗಳೂರು ಸುದ್ದಿ

By

Published : Oct 27, 2019, 2:04 PM IST

ಬೆಂಗಳೂರು: ದೆಹಲಿಯ ತಿಹಾರ್​ ಜೈಲಿನಿಂದ ಬಿಡುಗಡೆಯಾಗಿ ಶನಿವಾರ ಬೆಂಗಳೂರಿಗೆ ಆಗಮಿಸಿರುವ ಡಿ.ಕೆ.ಶಿವಕುಮಾರ್​ ಅವರನ್ನ ನೋಡಲು ಅವರ ನಿವಾಸಕ್ಕೆ ಕೇಂದ್ರ ಮಾಜಿ ಸಚಿವ ಕೆ.ಹೆಚ್​.ಮುನಿಯಪ್ಪ ಇಂದು ಮುಂಜಾನೆ ಆಗಮಿಸಿದ್ದರು. ಇದೇ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ಡಿಕೆಶಿ ನಿವಾಸಕ್ಕೆ ಆಗಮಿಸಿದ್ದರು. ಈ ವಿಷಯ ತಿಳಿದು ಮುನಿಯಪ್ಪ, ಡಿ.ಕೆ.ಶಿವಕುಮಾರ್​ ಮನೆಯ ಒಳಗೆ ಹೋಗದೆ ಹಾಲ್​ನಲ್ಲೇ ಡಿಕೆಶಿಗೆ ಹೂಗುಚ್ಛ ನೀಡಿ ಅಲ್ಲಿಂದ‌ ತರಾತುರಿಯಲ್ಲಿ ತೆರಳಿದರು. ಕಳೆದ ತಿಂಗಳು ನಡೆದ ಕಾಂಗ್ರೆಸ್​ ಸಭೆಯಲ್ಲಿ ಪರಸ್ಪರ ನಿಂದಿಸಿಕೊಂಡಿದ್ದರು.

ABOUT THE AUTHOR

...view details