ಇತಿಹಾಸ ಪ್ರಸಿದ್ಧ ಸೋಮೇಶ್ವರ ಬ್ರಹ್ಮರಥ ಮೆರವಣಿಗೆ: ವಿಡಿಯೋ - ಸೋಮೇಶ್ವರ ಬ್ರಹ್ಮರಥ ಮೆರವಣಿಗೆ
ಇತಿಹಾಸ ಪ್ರಸಿದ್ಧ ಒಂಭತ್ತು ಮಾಗಣೆ ಸೋಮೇಶ್ವರ ಸೋಮನಾಥ ಕ್ಷೇತ್ರದಲ್ಲಿ ನೂತನ ಬ್ರಹ್ಮರಥ ಸಮರ್ಪಣೆಯೊಂದಿಗೆ, ಅಷ್ಟಬಂಧ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ, ಹೊರೆ ಕಾಣಿಕೆ ಹಾಗೂ ನೂತನ ಬ್ರಹ್ಮರಥದ ಭವ್ಯ ಮೆರವಣಿಗೆ ನಡೆಯಿತು. ಜೈ ವೀರಮಾರುತಿ ವ್ಯಾಯಾಮ ಶಾಲೆಯಲ್ಲಿ ಮೆರವಣಿಗೆಗೆ ಶ್ರೀ ಕ್ಷೇತ್ರ ಉಳಿಯದ ಧರ್ಮದರ್ಶಿ ದೇವುಮೂಲ್ಯಣ್ಣ, ಮಾಣಿಲದಾಮದ ಮೋಹನದಾಸ ಸ್ವಾಮೀಜಿ, ಸೋಮೇಶ್ವರ ಸೋಮನಾಥ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಬಿ. ರವೀಂದ್ರನಾಥ ರೈ ಚಾಲನೆ ನೀಡಿದರು.