ದೀಪಾವಳಿ ಅಷ್ಟೇ ಯಾಕೆ, ಎಲ್ಲಾ ಸಂದರ್ಭಗಳಲ್ಲೂ ಪಟಾಕಿ ನಿಷೇಧಿಸಿ : ಹಿಂದೂ ಜನ ಜಾಗೃತಿ ಸಮಿತಿ - ರಾಜ್ಯ ಸರ್ಕಾರದಿಂದ ಪಟಾಕಿ ಬ್ಯಾನ್
ಬೆಂಗಳೂರು : ದೀಪಾವಳಿ ಹಬ್ಬದ ವೇಳೆ ಪಟಾಕಿ ಸಿಡಿಸುವುದನ್ನು ರಾಜ್ಯ ಸರ್ಕಾರ ನಿಷೇಧ ಮಾಡಿದೆ. ಇದಕ್ಕೆ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದೆ. ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರ ಮೋಹನ ಗೌಡ ಮಾತನಾಡಿ, ಕೇವಲ ದೀಪಾವಳಿಗೆ ಮಾತ್ರ ಪಟಾಕಿ ಬ್ಯಾನ್ ಸೀಮಿತವಾಗಿರದೆ, ಈದ್ ಮಿಲಾದ್, ಕ್ರಿಸ್ಮಸ್, ಡಿಸೆಂಬರ್ 31, ಚುನಾವಣಾ ವಿಜಯೋತ್ಸವ, ಹೀಗೆ ಎಲ್ಲಾ ಸಮಯದಲ್ಲೂ ಪಟಾಕಿ ಸಿಡಿಸುವುದನ್ನು ಶಾಶ್ವತವಾಗಿ ನಿಷೇಧ ಮಾಡಬೇಕು ಎಂದು ಆಗ್ರಹಿಸಿದರು.