ಲಾಕ್ಡೌನ್ ಎಫೆಕ್ಟ್: 175 ಕಿ.ಮೀ. ದೂರದಿಂದಲೇ ಕಾಣುತ್ತಿದೆ ಹಿಮಭರಿತ ಗಂಗೋತ್ರಿ
ಲಾಕ್ಡೌನ್ನಿಂದಾಗಿ ಕೈಗಾರಿಕೆಗಳೆಲ್ಲ ಸ್ತಬ್ಧವಾಗಿ ವಾತಾವರಣವೆಲ್ಲ ಸ್ವಚ್ಛಂದವಾಗಿದೆ. ಹೀಗಾಗಿಯೇ ಉತ್ತರಪ್ರದೇಶದ ಸಹರಾನ್‌ಪುರದಿಂದ 175 ಕಿ.ಮೀ ದೂರದಲ್ಲಿರುವ ಉತ್ತರಾಖಂಡ್ನ ಗಂಗೋತ್ರಿಯ ಹಿಮಾವೃತ ಶಿಖರಗಳು, ಸುಂದರ ಬೆಟ್ಟಗಳು ಕಾಣುತ್ತಿವೆ. ಈಗ ಮಾಲಿನ್ಯದ ಪ್ರಮಾಣ ಗಣನೀಯ ಪ್ರಮಾಣದಲ್ಲಿ ತಗ್ಗಿದೆ. ಹೀಗಾಗಿಯೇ ದೂರದಿಂದಲೇ ಗೋಚರಿಸುತ್ತಿರೋ ಈ ಹಿಮಭರಿತ ಶಿಖರಗಳ ಫೋಟೋವನ್ನು ಕೆಲವರು ತಮ್ಮ ಕ್ಯಾಮೆರಾಗಳಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಹಿಮಭರಿತ ಬೆಟ್ಟಗಳ ಫೋಟೋ ಕೂಡ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.