ಕಾವೇರಿದ ಹುಣಸೂರು ಉಪ ಕದನ.. ಈಗ ಜಿಟಿಡಿ ಎಲ್ರಿಗೂ ಮತ'ಜೇನು'! - ಹುಣಸೂರು ಉಪಚುನಾವಣೆ ಸುದ್ದಿ
ರಾಜ್ಯದ 15 ಕ್ಷೇತ್ರಗಳ ಉಪಚುನಾವಣೆಯ ಕಾವು ದಿನದಿಂದ ದಿನಕ್ಕೆ ರಂಗೇರುತ್ತಿದೆ. ಈಗಾಗಲೇ ನಾಮಪತ್ರ ಸಲ್ಲಿಕೆಯೂ ಮುಗಿದಿದೆ. ಇನ್ನೇನಿದ್ರೂ ಭರ್ಜರಿ ಪ್ರಚಾರದ ಅಖಾಡಕ್ಕಿಳಿದು ಅಭ್ಯರ್ಥಿಗಳು ಮತದಾರರ ಓಲೈಕೆಗಾಗಿ ರಣತಂತ್ರ ರೂಪಿಸುತ್ತಿದ್ದಾರೆ. ಇತ್ತ ಹುಣಸೂರು ಕ್ಷೇತ್ರದಲ್ಲಿ ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ತಟಸ್ಥವಾಗಿರೋ ಮಾಜಿ ಸಚಿವ ಜಿ ಟಿ ದೇವೇಗೌಡ ಅವರನ್ನ ತಮ್ಮತ್ತ ಸೆಳೆಯೋಕೆ ಕಾಂಗ್ರೆಸ್ ಹಾಗೂ ಬಿಜೆಪಿ ಪೈಪೋಟಿ ನಡೆಸ್ತಿವೆ.