ಗಣಿ ಜಿಲ್ಲೆಯ ಗಡಿಭಾಗದಲ್ಲಿ ಹೈ - ಅಲರ್ಟ್.. ಇಲ್ಲಿದೆ ಪ್ರತ್ಯಕ್ಷ ವರದಿ - corona virus
ಬಳ್ಳಾರಿ: ಮೂರನೇ ಹಂತದ ಲಾಕ್ಡೌನ್ ಹಿನ್ನೆಲೆ, ಗಣಿನಾಡು ಬಳ್ಳಾರಿ ಜಿಲ್ಲೆಗೆ ಅಂತಾರಾಜ್ಯ ಗಡಿಭಾಗದಿಂದ ವೈದ್ಯಕೀಯ ಸೇವೆ ಸೇರಿದಂತೆ ಇನ್ನಿತರ ಅಗತ್ಯ ಸೇವೆಗಳನ್ನ ಹೊರತುಪಡಿಸಿ, ಬೇರೆ ಯಾರೂ ಕೂಡ ಪ್ರವೇಶ ಮಾಡದಂತೆ ನಿಷೇಧಿಸಲಾಗಿದೆ. ಅಲ್ಲದೇ, ವೈದ್ಯಕೀಯ ಸೇವೆಗಾಗಿ ಬಂದಿರುವ ಅಂತಾ ರಾಜ್ಯದವರನ್ನ ಕಡ್ಡಾಯವಾಗಿ 14 ದಿನಗಳ ಕಾಲ ಕ್ವಾರಂಟೈನ್ ಮಾಡಲಾಗುತ್ತೆ ಎಂಬ ಕಟ್ಟುನಿಟ್ಟಿನ ಆದೇಶವನ್ನ ಜಿಲ್ಲಾಡಳಿತ ಹೊರಡಿಸಿದ್ದು, ಈ ಕುರಿತು ಈಟಿವಿ ಭಾರತ ಪ್ರತಿನಿಧಿ ನೀಡಿರುವ ಪ್ರತ್ಯಕ್ಷ ವರದಿ ಇಲ್ಲಿದೆ.