ಹಾವೇರಿ ಸ್ತಬ್ಧ: ಡೋಂಟ್ ಕೇರ್ ಎಂದವರಿಗೆ ಪೊಲೀಸರಿಂದ ಕಜ್ಜಾಯ - ಹಾವೇರಿ ಲೆಟೆಸ್ಟ್ ನ್ಯೂಸ್
ಕೊರೊನಾ ಸೋಂಕು ಹರಡದಂತೆ ತಡೆಯಲು ಭಾರತ ಲಾಕ್ಡೌನ್ ಘೋಷಣೆಯಾಗಿದ್ರೂ ಹಾವೇರಿಯಲ್ಲಿ ಕೆಲವು ಜನರು ಮಾತ್ರ ಡೋಂಟ್ ಕೇರ್ ಅಂತಾ ಬೈಕ್ ಮತ್ತು ಕಾರ್ಗಳಲ್ಲಿ ಓಡಾಡುವ ದೃಶ್ಯಗಳು ಕಂಡುಬಂದಿವೆ. ಹೀಗೆ ಓಡಾಡೋರಿಗೆ ಪೊಲೀಸರು ಬಿಸಿ ಬಿಸಿ ಕಜ್ಜಾಯ ಕೊಟ್ಟು ಮನೆಯಿಂದ ಹೊರಗೆ ಓಡಾಡದಂತೆ ಹೇಳಿ ಕಳಿಸುತ್ತಿದ್ದಾರೆ. ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಹೆಚ್ಚುವರಿ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಸಿಪಿಐ ಟಿ.ಮಂಜುನಾಥ ನೇತೃತ್ವದಲ್ಲಿ ಕಾರ್ಯಾಚರಣೆಗೆ ಇಳಿದಿರುವ ಪೊಲೀಸರು, ಮನೆಬಿಟ್ಟು ಹೊರಗೆ ಓಡಾಡೋರಿಗೆ ಲಾಠಿ ರುಚಿ ತೋರಿಸಿ ಕಳುಹಿಸುತ್ತಿದ್ದಾರೆ.