'ಹೆಲ್ಮೆಟ್ ಬಳಸಿ, ಪ್ರಾಣ ಉಳಿಸಿ'...ಇದು ಚಿತ್ರದುರ್ಗ ಪೊಲೀಸರ ಮನವಿ - Helmet awareness at Chitradurga
ಚಿತ್ರದುರ್ಗ: 'ಹೆಲ್ಮೆಟ್ ಬಳಸಿ, ಪ್ರಾಣ ಉಳಿಸಿ' ಎಂಬ ಘೋಷವಾಕ್ಯದಡಿ ಸಂಚಾರ ಪೊಲೀಸರು ಜಾಗೃತಿ ನಡೆಸಿದರು. ನಗರದ ಗಾಂಧಿ ವೃತ್ತದಿಂದ ಆರಂಭವಾದ ಜಾಗೃತಿ ಜಾಥಕ್ಕೆ ಡಿವೈಎಸ್ಪಿ ಪಾಂಡುರಂಗ ಚಾಲನೆ ನೀಡಿದರು. ಬಳಿಕ ಸಂಚಾರ ಪೊಲೀಸ್ ಠಾಣೆಯ ಪಿಎಸ್ಐ ರೇವತಿ ನೇತೃತ್ವದಲ್ಲಿ ನಗರದ ಮಹಾವೀರ ವೃತ್ತ, ಅಂಬೇಡ್ಕರ್ ವೃತ್ತ, ಡಿಸಿ ವೃತ್ತದ ಮೂಲಕ ಸಾಗಿ ಬಂದ ಜಾಥಾ ಬಿಡಿ ರಸ್ತೆಯಲ್ಲಿ ಸಮಾಪ್ತಿಗೊಂಡಿತು. ಪೊಲೀಸ್ ಸಿಬ್ಬಂದಿ ಹೆಲ್ಮೆಟ್ ಧರಿಸಿ ಬೈಕ್ ಓಡಿಸುವ ಮೂಲಕ ಜಾಥಾದಲ್ಲಿ ಪಾಲ್ಗೊಂಡರು.