ಭೀಮೆಯ ರೌದ್ರ ನರ್ತನ : ಸಂಗಮ ಚಕ್ರೇಶ್ವರನಿಗೆ ಜಲದಿಗ್ಭಂಧನ - flood in karnataka 2019'
ಕಲಬುರಗಿ : ಮಹಾರಾಷ್ಟ್ರದಲ್ಲಿ ಧಾರಾಕಾರ ಮಳೆ ಹಿನ್ನೆಲೆ ನದಿಯ ಒಳಹರಿವಿನ ಪ್ರಮಾಣ ಮತ್ತಷ್ಟು ಹೆಚ್ಚಾಗಿದ್ದು, ಭೀಮಾ ನದಿಯ ತಟದಲ್ಲಿ ಪ್ರವಾಹ ಭೀತಿ ಹೆಚ್ಚಾಗಿದೆ. ಅಫಜಲಪೂರ ತಾಲೂಕಿನ ಸುಕ್ಷೇತ್ರ ದೇವಲಗಾಣಗಾಪುರದ ಸಂಗಮ ಕ್ಷೇತ್ರದಲ್ಲಿರುವ ಚಕ್ರೇಶ್ವರ ದೇವಸ್ಥಾನ ಸೇರಿ ಹಲವು ಚಿಕ್ಕಪುಟ್ಟ ದೇವಸ್ಥಾನಗಳ ಮುಳುಗಡೆಯಾಗಿವೆ. ಔದುಂಬರ ಪ್ರದೇಶ ಸಂಪೂರ್ಣ ಜಲಾವೃಗೊಂಡ ಪರಿಣಾಮ ವೃಕ್ಷದ ಪಾರಾಯಣದಲ್ಲಿ ದ್ಯಾನಕ್ಕೆ ಕುಳಿತುಕೊಳ್ಳುತ್ತಿದ್ದ ಭಕ್ತರಿಗೆ ಜಲಸಂಕಟ ಎದುರಾಗಿದೆ. ದೇವಸ್ಥಾನದ ಒಳಗೆ ಜಲಾವೃತಗೊಂಡು ಅಷ್ಠತೀರ್ಥಗಳು ಮುಳುಗಡೆಯಾಗಿವೆ.